




ಕಡಬ ಟೈಮ್ಸ್(KADABA TIMES):ಟ್ರಿಪ್ ಮುಗಿಸಿದ ನಂತರ ಬಸ್ ನಿಲ್ಲಿಸಿ ಡ್ರೈವರ್ – ನಿರ್ವಾಹಕರು ಊಟ ಮಾಡಲು ತೆರಳಿದ್ದ ವೇಳೆ ಯುವಕನೊಬ್ಬ ಬಸ್‌ನಲ್ಲಿ ಇಟ್ಟಿದ್ದ ಕಲೆಕ್ಷನ್ ಹಣ ಎಗರಿಸಿದ ಘಟನೆ ಮಂಗಳೂರು ನಗರದ ಸ್ಟೇಟ್‌ಬ್ಯಾಂಕ್‌ನಲ್ಲಿ ನಿನ್ನೆ ನಡೆದಿದೆ.
ಬಸ್ ಏರಿದ ಯುವಕ ಯಾರು ಇಲ್ಲದನ್ನು ನೋಡಿ ಕಂಡಕ್ಟರ್ ಪರ್ಸ್‌ನಲ್ಲಿದ್ದ ಕಲೆಕ್ಷನ್ ಮಾಡಿದ 4,500 ರೂಪಾಯಿಗಳನ್ನು ಎಗರಿಸಿ ಜಾಗ ಖಾಲಿ ಮಾಡಿದ್ದಾನೆ.

ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.