ಕಡಬ: ಅನಗತ್ಯ ಮೋರಿ ನಿರ್ಮಾಣದಿಂದ ರಸ್ತೆ ಕೆಸರುಮಯ:ಬಲ್ಯ ಗಾಮಸ್ಥರಿಂದ ತಾ.ಪಂ ಗೆ ದೂರು

ಕಡಬ: ಅನಗತ್ಯ ಮೋರಿ ನಿರ್ಮಾಣದಿಂದ ರಸ್ತೆ ಕೆಸರುಮಯ:ಬಲ್ಯ ಗಾಮಸ್ಥರಿಂದ ತಾ.ಪಂ ಗೆ ದೂರು

Kadaba Times News

ಕಡಬ ಟೈಮ್ಸ್(KADABA TIMES):ಕುಟ್ರುಪ್ಪಾಡಿ: ಇಲ್ಲಿನ ಬಲ್ಯ ಗ್ರಾಮದ ಕೇರ್ಪುಡೆ, ಏನಡ್ಕ, ಕೆರನಡ್ಕ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಏನಡ್ಕ ಸಮೀಪ ಅನಗತ್ಯವಾಗಿ ಮೊರಿ ನಿರ್ಮಸಿ ಜನರಿಗೆ ತೊಂದರೆ ನೀಡಲಾಗಿದೆ ಎಂದು ಆರೋಪಿಸಿ ಬಲ್ಯ ಗ್ರಾಮಸ್ಥರು ತಾ.ಪಂ  ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.

ಕಡಬ ತಾಲೂಕಿನ ಬಲ್ಯ ಗ್ರಾಮದ  ಏನಡ್ಕ ಸಮೀಪ ಅವಶ್ಯಕತೆಯೇ ಇಲ್ಲದ ಜಾಗಕ್ಕೆ ಮೋರಿ ನಿರ್ಮಾಣ ಮಾಡಿರುವುದರಿಂದ ರಸ್ತೆಯಲ್ಲಿ ಕೆಸರು ತುಂಬಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ತಕ್ಷಣ ಮೋರಿ ತೆ ರವು ಮಾಡಬೇಕು ಎಂದು ಗ್ರಾಮಸ್ಥರು ದೂರಿನಲ್ಲಿ ಮನವಿ ಮಾಡಿದ್ದಾರೆ.

ಕಾಮಗಾರಿಯನ್ನು ಎಪ್ರಿಲ್ ೨೩ ಕ್ಕೆ ಪ್ರಾರಂಭಿಸಿದ್ದು,  ಗ್ರಾ.ಪಂ  ನಮ್ಮ ಬೇಡಿಕೆಯ ಕಾಮಗಾರಿಯನ್ನು ಮಾಡುವ ಬದಲು ನೀರು ಹರಿಯದ ಕಡೆ ಮೋರಿಯೊಂದನ್ನು ನಿರ್ಮಿಸಿದೆ. ಕಾಮಗಾರಿಯ ಬಗ್ಗೆ ಸ್ಥಳೀಯರಿಗೆ ಯಾವುದೇ ಮಾಹಿತಿ ಇಲ್ಲ.   ಈ ಬ್ಗಗೆ ಪಂಚಾಯಿತಿ ಅಧ್ಯಕ್ಷರಿಗೆ ಕೇಳಿದರೆ ಅಲ್ಲಿ ಕಾಮಗಾರಿ ನಿರ್ವಹಿಸಿರುವುದಕ್ಕೆ ನಾವು ಹೊಣೆಗಾರರಲ್ಲ, ಆ ವಾರ್ಡಿನ ಸದಸ್ಯರು ಹಾಗೂ ಗುತ್ತಿಗೆದಾರರೇ ಜವಾಬ್ದಾರರು ಎಂದು ತಿಳಿಸಿದ್ದಾರೆ.

ಕಾಮಗಾರಿಯ ಪರಿಶೀಲನೆ ಮಾಡಿ ಎಂದು ಸ್ಥಳೀಯರು ಮನವಿ ಮಾಡಿದರೂ ಪಂಚಾಯಿತಿಯಿಂದ  ಯಾವುದೇ ಸ್ಪಂದನವಿಲ್ಲ. ಮಾತ್ರವಲ್ಲ ಈ ಕಾಮಗಾರಿಯ ಗುಣಮಟ್ಟದ ಬಗ್ಗೆಯೂ  ಅನುಮಾನವಿದ್ದು ತಕ್ಷಣ ಮೋರಿ ತೆರವು ಮಾಡಬೇಕು ಎಂದು ದೂರಿನಲ್ಲಿ ಅಗ್ರಹಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top