




ಕಡಬ ಟೈಮ್ಸ್(KADABA TIMES):ಸುಳ್ಯ ವಿಧಾನ ಸಭಾ ಕ್ಷೇತ್ರದ ಆರಂತೋಡು ಗ್ರಾಮದ ಅಡ್ತಲೆ ವಾರ್ಡ್ ನ ಕೆಲಸ್ಥಳ ಗಳಲ್ಲಿ ಆರಂತೋಡು -ಎಲಿಮಲೆ ರಸ್ತೆ ಅಭಿವೃದ್ಧಿಗೆ ಅಗ್ರಹಿಸಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆ ಭಾಗದ ಗ್ರಾ.ಪಂ. ಸದಸ್ಯ ಕೇಶವ ಅಡ್ತಲೆಯವರು ಈ ರಸ್ತೆಯ ಅಭಿವೃದ್ಧಿ ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದ್ದು, ಮತದಾನ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿಯುವಂತೆ ವಿನಂತಿಸಿದ್ದಾರೆ.
ಅಡ್ತಲೆ ನಾಗರೀಕ ಹಿತ ರಕ್ಷಣಾ ವೇದಿಕೆ ಯ ನನ್ನ ಸ್ನೇಹಿತರು ಮತ್ತು ವಾರ್ಡ್ ನ ನಾಗರಿಕ ಬಂಧುಗಳ ಬಹು ವರ್ಷ ಗಳ ಬೇಡಿಕೆ ಮತ್ತು ಕೇಳಿಕೆ ನಿಜವಾಗಿಯೂ ನ್ಯಾಯ ಸಮ್ಮತ ವಾಗಿದೆ. ಪಕ್ಷದ ಕಡೆಯಿಂದ ಈ ಬಗ್ಗೆ ವಿಶೇಷವಾಗಿ ಬಿ. ಜೆ. ಪಿ. ಮಂಡಲ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು ವಿಶೇಷ ಮುತುವರ್ಜಿ ವಹಿಸಿ ಸರಕಾರ ಮತ್ತು ಸಚಿವರಿಗೆ ಈ ರಸ್ತೆಯ ಅಭಿವೃದ್ಧಿಯ ಬಗ್ಗೆ ವಿಶೇಷ ಗಮನಹರಿಸುವ ಬಗ್ಗೆ ಮನವರಿಕೆ ಮಾಡಿದುದರಿಂದ ಸಚಿವರು ವಿಶೇಷ ೫೦ಕೋಟಿ ಅನುದಾನ ದಲ್ಲಿ ಆರಂತೋಡು ಎಲಿಮಲೆ ರಸ್ತೆಗೆ ೧ಕೋಟಿ ಬಿಡುಗಡೆ ಮಾಡಿದ್ದು ಸದ್ಯದಲ್ಲಿ ಕಾಮಗಾರಿ ಆರಂಭ ಕೊಳ್ಳಲಿದೆ.

ಮತ್ತೊಂದು ವಿಶೇಷ ಅನುದಾನ ದಲ್ಲಿ ೨.೪೫ಕೋಟಿ ಬಿಡುಗಡೆ ಪ್ರಕ್ರಿಯೇ ಕೊನೆ ಹಂತದಲ್ಲಿದ್ದು, ಅದು ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ. ಸಚಿವರು ಅಡ್ತಲೆ ವಾರ್ಡಿನ ಒಳಗಿನ ಸಂಪರ್ಕ ರಸ್ತೆಗಳಿಗೆ ವಿಶೇಷ ವಾಗಿ ಆಸಕ್ತಿ ವಹಿಸಿ ಕಳೆದ ೫ವರ್ಷದಲ್ಲಿ ೧ ಕೋಟಿಗೂ ಹೆಚ್ಚು ರಸ್ತೆ ಕಾಂಕ್ರಿಟ್ ಕರಣಕ್ಕೆ ಅನುದಾನ ನೀಡಿದುದಲ್ಲದೆ ಸದ್ಯದಲ್ಲಿ ಅಡ್ತಲೆ-ಬೆದ್ರುಪಣೆ ಪಂಚಾಯತ್ ರಸ್ತೆಗೆ ಸುಮಾರು ೩೦ಲಕ್ಷ, ಹಾಸ್ಪರೆ- ಕಲ್ಲುಗುಡ್ಡೆ ರಸ್ತೆಗೆ ೧೦ಲಕ್ಷ, ಪಿಂಡಿಮನೆ- ಅರಮನೆಗಯಾ ರಸ್ತೆ ೧೦ಲಕ್ಷ ಅನುದಾನ ಬಿಡುಗಡೆ ಮಾಡಿದ್ದು ಸದ್ಯದಲ್ಲಿ ಈ ಎಲ್ಲಾ ಕಾಮಗಾರಿ ಗಳು ಆರಂಭ ಕೊಳ್ಳಲಿದೆ.
ಆದುದರಿಂದ ಅಡ್ತಲೆ ವಾರ್ಡ್ ನಾಗರಿಕ ಬಂಧುಗಳು ಪ್ರಜಾಪ್ರಭುತ್ವ ವ್ಯವಸ್ಥೆ ಗೆ ವಿರುದ್ಧ ವಾದ ಮತದಾನ ಬಹಿಷ್ಕರಿಸದಂತೆ ನಿರ್ಧಾರ ದಿಂದ ಹಿಂದೆ ಸರಿದು ಸಹಕರಿಸುವರೆಂದು ನಂಬಿದ್ದೇನೆ ಮತ್ತು ಆದಷ್ಟು ಶೀಘ್ರದಲ್ಲಿಎಲ್ಲಾ ಕಾಮಗಾರಿ ಆರಂಭ ಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.