




ಕಡಬ: ಇಲ್ಲಿನ ಪಟ್ಟಣ ಪಂಚಾಯತ್ನ 13 ವಾರ್ಡ್ಗಳ ಚುನಾವಣೆಗೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ಮಾಡಲಾಗಿದ್ದು, 11 ನಾಮಪತ್ರಗಳು ತಿರಸ್ಕೃತಗೊಂಡು, 36 ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.
ಪಟ್ಟಣ
ಪಂಚಾಯತ್ ವಾರ್ಡ್ ಸಂಖ್ಯೆ 2 ಕೋಡಿಬೈಲು ಪ.ಜಾ.ಮಹಿಳೆ
ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಕಮಲಾಕ್ಷಿ, ವಾರ್ಡ್
ಸಂಖ್ಯೆ 3. ಪನ್ಯ ಸಾಮಾನ್ಯ ಸ್ಥಾನಕ್ಕೆ ಕಾಂಗ್ರೆಸ್ ಮಹಮ್ಮದ್ ಶರೀಫ್, ವಾರ್ಡ್ ಸಂಖ್ಯೆ 4 ಬೆದ್ರಾಜೆ ಸಾಮಾನ್ಯ ಸ್ಥಾನಕ್ಕೆ ಕಾಂಗ್ರೆಸ್‌ನ ರಶೀದ್, ವಾರ್ಡ್
ಸಂಖ್ಯೆ 5 ಮಾಲೇಶ್ವರ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಕಾಂಗ್ರೆಸ್
ನ ಮ್ಯೋದಿನ್, ವಾರ್ಡ್ ಸಂಖ್ಯೆ 6 ಕಡಬ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಕಾಂಗ್ರೆಸ್ ನ ವಾರಿಜ, ವಾರ್ಡ್
ಸಂಖ್ಯೆ 7 ಪಣೆಮಜಲು ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಕಾಂಗ್ರೆಸ್‌ನ ಹರಿಪ್ರಸಾದ್, ವಾರ್ಡ್
ಸಂಖ್ಯೆ 9 ಮೂರಾಜೆ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಕಾಂಗ್ರೆಸ್‌ನ ಮುರಳಿ ಎಂ.,
ವಾರ್ಡ್ ಸಂಖ್ಯೆ 10 ದೊಡ್ಡ ಕೊಪ್ಪ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಕಾಂಗ್ರೆಸ್ ಜಯಂತಿ, ವಾರ್ಡ್ ಸಂಖ್ಯೆ 11 ಕೋಡಿಂಬಾಳ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಕಾಂಗ್ರೆಸ್ ಮೀನಾಕ್ಷಿ, ವಾರ್ಡ್ ಸಂಖ್ಯೆ 12. ಮಜ್ಜಾರು ಪರಿಶಿಷ್ಟ ಜಾತಿ ಸ್ಥಾನಕ್ಕೆ ಕಾಂಗ್ರೆಸ್‌ನ ಬಾಬು ಹಾಗೂ
ವಾರ್ಡ್ ಸಂಖ್ಯೆ 13 ಪುಳ್ಳಿಕುಕ್ಕು ಪರಿಶಿಷ್ಟ ಪಂಗಡ ಸ್ಥಾನಕ್ಕೆ ಕಾಂಗ್ರೆಸ್‌ನ ವಿಶ್ವನಾಥ ಸಲ್ಲಿಸಿದ್ದ
ನಾಮಪತ್ರ ಕ್ರಮಬದ್ಧವಾಗಿಲ್ಲದಿರುವುದರಿಂದ
ತಿರಸ್ಕೃತಗೊಂಡಿದೆ.