Part-Time Job Frauds: ಆನ್ ಲೈನ್ ವಂಚಕರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ಮಹಿಳೆ

Part-Time Job Frauds: ಆನ್ ಲೈನ್ ವಂಚಕರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ಮಹಿಳೆ

Kadaba Times News
0

 ಕಡಬ: ಪಾರ್ಟ್ ಟೈಮ್ ಜಾಬ್ ಆಮಿಷಕ್ಕೆ ಒಳಗಾಗಿ ಕಡಬದ ಮಹಿಳೆಯೊಬ್ಬರು 1.35 ಲಕ್ಷ ರೂ.ಕಳೆದುಕೊಂಡ ಘಟನೆ ವರದಿಯಾಗಿದೆ.



ಕಡಬದ  ಎನ್‌.ಸಿ ಪೂರ್ವಿಕಾ ರೈ, ಹಣ ಕಳೆದು ಕೊಂಡ ಮಹಿಳೆ . .20ರಂದು Instagram Page ನಲ್ಲಿ work From home ಎಂಬ ಜಾಹೀರಾತಿನೊಂದಿಗೆ ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿದಾಗ ವಾಟ್ಸಪ್ ತೆರೆದಿದ್ದು, ಅದರಲ್ಲಿ Part time Job ನೀಡುವುದಾಗಿಯೂ ನೀವು ಮಾಡಿದ ಕೆಲಸಕ್ಕೆ 20% ಕಮಿಷನ್ ಹಣ ಗಳಿಸಬಹುದು ಎಂಬುದಾಗಿ ತಿಳಿಸಿದ್ದರು.

 

ವಂಚಕರು ಲಿಂಕ್  ಕಳುಹಿಸಿದ್ದು ಆ ಲಿಂಕ್ ನ್ನು ಕ್ಲಿಕ್ ಮಾಡಿ  Product Review ಮಾಡಿ Like ನೀಡಿ Screen shot ತೆಗೆದು ಬಳಿಕ Whatsapp ನಂಬ್ರಕ್ಕೆ ಕಳುಹಿಸಿ Task Complete ಮಾಡಲು ತಿಳಿಸಿದಂತೆ Task Complete ಮಾಡುವ ಬಗ್ಗೆ ನಿರ್ದೇಶನ ನೀಡುತ್ತಿದ್ದರು.

ಬಳಿಕ ಹೆಚ್ಚಿನ ಹಣ ಹಾಕುವಂತೆ ಸೂಚಿಸಿದ್ದು, ತಾನು ಅಪರಿಚಿತ ವ್ಯಕ್ತಿಗಳು ತಿಳಿಸಿದ ಯು.ಪಿ. ಐಡಿಗಳಿಗೆ ತನ್ನ ಬ್ಯಾಂಕ್ ಖಾತೆಯಿಂದ ಒಟ್ಟು 1.35 ಲಕ್ಷ ರೂ. ಕಳುಹಿಸಿದ್ದು, ನಂತರ ಸದ್ರಿ ಹಣವನ್ನು Whatsapp ಮಾಡಲು ಆಗಿರುವುದಿಲ್ಲ. Whatsapp ಮಾಡಲು ಕೇಳಿದಾಗ ಇನ್ನೂ ಹೆಚ್ಚಿನ ಹಣ ಹಾಕುವಂತೆ ತಿಳಿಸಿರುತ್ತಾರೆ ಎಂದು ಮಹಿಳೆ ನೀಡಿದ ದೂರಿನಂತೆ ಸಿಇಎನ್ ಅಪರಾಧ ಪೊಲೀಸ್ ಠಾಣೆ .ಕ್ರ ನಂ: 59-2025, ಕಲಂ: 66 D) IT ACT 318(4 ) BNS Actಯಂತೆ ಪ್ರಕರಣ ದಾಖಲಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top