



ಕಡಬ ಟೈಮ್ಸ್, ಪ್ರಮುಖ ಸುದ್ದಿ: ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ನಡೆಯಲಿದೆ. ಕಳಾರ ಮತ್ತು ಕಡಬ ವಾರ್ಡ್ ನಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್.ಡಿ.ಪಿ.ಐ ಮತ್ತು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅದರಲ್ಲೂ ಕೋಡಿಂಬಾಳ ವಿದ್ಯಾನಗರದ ಪ್ರೇಮಾ ಅವರು ಬಿಜೆಪಿ ಅಭ್ಯರ್ಥಿಯಾಗಿ(1ನೇ ಕಳಾರ ವಾರ್ಡ್ ಮತ್ತು 6ನೇ ಕಡಬ ವಾರ್ಡ್) ಈ ಎರಡು ವಾರ್ಡ್ಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ . ಪನ್ಯ ವಾರ್ಡ್ ನಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್.ಡಿ.ಪಿ.ಐ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿ ಕಣದಲ್ಲಿದ್ದಾರೆ . ಆದರೆ ಸಕ್ರೀಯವಾಗಿದ್ದ ಜೆಡಿಎಸ್ ಪ.ಪಂ ಚುನಾವಣೆಯಿಂದ ಹಿಂದೆ ಸರಿದಿದೆ. ಅಷ್ಟಕ್ಕೂ ಜೆಡಿಯಸ್ ಬಿಜೆಪಿ ಜೊತೆ ಕೈಜೋಡಿಸುತ್ತಾ ಇಲ್ಲ, ಕಾಂಗ್ರೆಸ್ ಗೆ ಬೆಂಬಲ ಸೂಚಿಸುತ್ತಾ ಎನ್ನುವ ಚರ್ಚೆ ಸಾರ್ವಜನಿಕವಲಯದಲ್ಲಿ ನಡೆಯುತ್ತಿದೆ.
ಕಡಬದಲ್ಲಿ ಹಲವು ಅಭಿವೃದ್ದಿ ಕಾರ್ಯಾದಲ್ಲೂ ನಮ್ಮ ಪಕ್ಷದ ಪಾತ್ರವೂ ಇದೆ ಎಂದು ಇಲ್ಲಿನ ಜೆಡಿಯಸ್ ನಾಯಕರು ಸಭೆಗಳಲ್ಲಿ ಹೇಳಿಕೊಂಡಿದ್ದರು ,ಕೆಲವು ಗಮನಾರ್ಹ ಕೆಲಸಗಳು ನಡೆದಿದ್ದವು. ಈ ಬಾರಿಯ ಪ.ಪಂ ಚುನಾವಣೆಯಲ್ಲೂ 13 ವಾರ್ಡಿನಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಈ ಹಿಂದೆ ಸುದ್ದಿ ಹಬ್ಬಿಸಿದ್ದರು. ಆದರೆ ಯಾವುದು ಕಾರ್ಯರೂಪಕ್ಕೆ ಬಂದಿಲ್ಲ. ಕಡಬದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಇಲ್ಲಿನ ನಾಯಕರು ಪ.ಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದರು. ಬಿಜೆಪಿಯ ನಾಯಕರೂ ಒಮ್ಮತ ಸೂಚಿಸಿ ಐದು ಸೀಟು ಕೊಡುವ ಭರವಸೆ ನೀಡಿದ್ದರು ಎನ್ನಲಾಗುತ್ತಿದೆ. ಬಳಿಕ ಕನಿಷ್ಠ ಮೂರು ಸೀಟು ಕೇಳಿದರೂ ಸ್ಪಷ್ಟತೆ ಇರಲಿಲ್ಲ, ಹೀಗಾಗಿಯೇ ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಹೇಳಲಾಗುತ್ತಿದ್ದು. ಈ ಸಾರ್ವಜನಿಕ ಚರ್ಚೆ ಮತ್ತು ಊಹಾಪೋಹಗಳಿಗೆ ಬಿಜೆಪಿ ಜೆಡಿಯಸ್ ನಾಯಕರು ಸಮರ್ಪಕ ಉತ್ತರ ನೀಡಬೇಕಾಗಿದೆ.
ಜೆಡಿಯಸ್ ಪ್ರಮುಖರ ಮಾಹಿತಿ ಪ್ರಕಾರ ಸ್ವತಂತ್ರವಾಗಿ ಪ.ಪಂ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜ್ಯ ನಾಯಕರಿಂದ ಯಾವುದೇ ಒತ್ತಡಗಳು ಬಂದಿಲ್ಲ ಎನ್ನಲಾಗುತ್ತಿದೆ. ಜೊತೆಗೆ ಇತ್ತೀಚೆಗೆ ಹಾಸನದಲ್ಲಿ ನಡೆದ ಗಂಭೀರ ಪ್ರಕರಣದ ಬಳಿಕವೂ ದೊಡ್ದ ಮಟ್ಟದ ಹೊಡೆತ ಪಕ್ಷಕ್ಕೆ ಉಂಟಾಗಿದೆ.ಹೀಗಾಗಿ ಫಂಡಿಂಗ್ ವಿಚಾರವೂ ಚರ್ಚೆಯಲ್ಲಿ ಇರದ ಕಾರಣ ಸ್ವಯಂ ನಿರ್ಧಾರದಿಂದ ಸ್ಪರ್ಧಿಸಲು ಮುಂದಾಗಿಲ್ಲ ಎಂಬ ಮಾಹಿತಿ ಲಭಿಸಿದೆ. ಈ ಸಾರ್ವಜನಿಕ ಚರ್ಚೆ ಬಗ್ಗೆ ಜೆಡಿಯಸ್ ಮುಖಂಡ ಸಯ್ಯದ್ ಮೀರಾ ಸಾಹೇಬ್ ಪ್ರತಿಕ್ರಿಯೆ ನೀಡಿದ್ದು ಪ.ಪಂ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಯಾವುದೇ ಅಭ್ಯರ್ಥಿಗಳನ್ನು ಹಾಕಿಲ್ಲ, ನಮ್ಮ ಹೋರಾಟದ ಜೊತೆ ಬಂದ ಕೆಲವರು ಈ ಚುನಾವಣೆಯ ಸ್ಪರ್ಧೆಯಲ್ಲಿದ್ದಾರೆ ಅವರಿಗೆ ಬೆಂಬಲವಿದೆ. ನಮ್ಮಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ ಎಂದಿದ್ದಾರೆ. ನಮ್ಮ ಕುಟುಂಬ ಪರಿವಾರದ ಸದಸ್ಯರೊಬ್ಬರು ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನಿಗೆ ಉತ್ತರಿಸಿ ಕುಟುಂಬದ ಸದಸ್ಯರು ಯಾವುದೇ ಪಕ್ಷದಲ್ಲಿ ನಿಂತರೂ ಅವರಿಗೆ ಬೆಂಬಲ ,ಪ್ರೋತ್ಸಾಹ ನೀಡಬೇಕಾಗುತ್ತದೆ. ಅಭಿವೃದ್ದಿಗೆ ಒತ್ತು ನೀಡುವವರಿಗೆ ನಮ್ಮ ಬೆಂಬಲ ಎಂದಿದ್ದಾರೆ.
- ವಾರ್ಡ್ 1-ಕಳಾರ: ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾದ ಕಳಾರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ತಮನ್ನಾ ಜಬೀನ್, ಬಿಜೆಪಿಯಿಂದ ಪ್ರೇಮಾ, ಎಸ್ಡಿಪಿಐನಿಂದ ಸಮೀರಾ ಹಾರಿಸ್, ಪಕ್ಷೇತರರಾಗಿ ಜೈನಾಬಿ.
- ವಾರ್ಡ್ 2-ಕೋಡಿಬೈಲು:ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾದ ಕೋಡಿಬೈಲು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮೋಹಿನಿ, ಬಿಜೆಪಿಯಿಂದ ಕುಸುಮ ಅಂಗಡಿಮನೆ.
- ವಾರ್ಡ್ 3-ಪನ್ಯ: ಸಾಮಾನ್ಯ ಅಭ್ಯರ್ಥಿಗೆ ಮೀಸಲಾದ ಪನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮಹಮ್ಮದ್ -ಝಲ್, ಬಿಜೆಪಿಯಿಂದ ಆದಂ ಕುಂಡೋಳಿ, ಎಸ್ಡಿಪಿಐನಿಂದ ಹಾರಿಸ್ ಕಳಾರ, ಮುಸಿಂ ಲೀಗ್ನಿಂದ ಕೆ.ಅಬ್ದುಲ್ ರಝಾಕ್.
- ವಾರ್ಡ್ 4-ಬೆದ್ರಾಜೆ: ಸಾಮಾನ್ಯ ಮೀಸಲು ಬೆದ್ರಾಜೆ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸೈಮನ್ ಸಿ.ಜೆ, ಬಿಜೆಪಿಯಿಂದ ಅಶೋಕ್ ಕುಮಾರ್ ಪಿ.
- ವಾರ್ಡ್ 5-ಮಾಲೇಶ್ವರ: ಹಿಂದುಳಿದ ವರ್ಗ ‘ಎ’ಗೆ ಮೀಸಲಾದ ಮಾಲೇಶ್ವರ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಕಾಶ್ ಎನ್.ಕೆ.,ಕಾಂಗ್ರೆಸ್ನಿಂದ ಹನೀಫ್ ಕೆ.ಎಂ.
- ವಾರ್ಡ್ 6-ಕಡಬ: ಸಾಮಾನ್ಯ ಮಹಿಳೆಗೆ ಮೀಸಲಾದ ಕಡಬ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ನೀಲಾವತಿ ಶಿವರಾಮ್, ಬಿಜೆಪಿಯಿಂದ ಪ್ರೇಮಾ, ಪಕ್ಷೇತರರಾಗಿ ಆಲೀಸ್ ಚಾಕೊ, ಎಸ್ಡಿಪಿಐನಿಂದ ಸ್ವಾಲಿಯತ್ ಜಸೀರಾ.
- ವಾರ್ಡ್ 7-ಪಣೆಮಜಲು: ಹಿಂದುಳಿದ ವರ್ಗ ‘ಬಿ’ಗೆ ಮೀಸಲಾದ ಪಣೆಮಜಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಗಣೇಶ್ ಗೌಡ,ಕಾಂಗ್ರೆಸ್ನಿಂದ ರೋಹಿತ್ ಗೌಡ.
- ವಾರ್ಡ್ 8-ಪಿಜಕ್ಕಳ: ಸಾಮಾನ್ಯ ಮೀಸಲು ಪಿಜಕ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಅಶ್ರಫ್ ಶೇಡಿಗುಂಡಿ, ಬಿಜೆಪಿಯಿಂದ ದಯಾನಂದ ಗೌಡ ಪಿ.
- ವಾರ್ಡ್ 9-ಮೂರಾಜೆ: ಹಿಂದುಳಿದ ವರ್ಗ ‘ಎ’ಗೆ ಮೀಸಲಾದ ಮೂರಾಜೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಕುಂಞಣ್ಣ ಕುದ್ರಡ್ಕ,ಕಾಂಗ್ರೆಸ್ನಿಂದ ಕೃಷ್ಣಪ್ಪ ಪೂಜಾರಿ.
- ವಾರ್ಡ್ 10-ದೊಡ್ಡಕೊಪ್ಪ: ಸಾಮಾನ್ಯ ಮಹಿಳೆಗೆ ಮಿಸಲಾದ ದೊಡ್ಡಕೊಪ್ಪ ಕ್ಷೇತ್ರದಲ್ಲಿ ಬಿಜೆಪಿಯಿಂದ ಗುಣವತಿ ರಘುರಾಮ,ಕಾಂಗ್ರೆಸ್ನಿಂದ ತುಳಸಿ.
- ವಾರ್ಡ್ 11-ಕೋಡಿಂಬಾಳ: ಸಾಮಾನ್ಯ ಮಹಿಳೆಗೆ ಮೀಸಲಾದ ಕೋಡಿಂಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಜ್ಯೋತಿ ಡಿ.ಕೋಲ್ಪೆ, ಬಿಜೆಪಿಯಿಂದ ಅಕ್ಷತಾ ಬಾಲಕೃಷ್ಣ ಗೌಡ.
- ವಾರ್ಡ್ 12-ಮಜ್ಜಾರು: ಪರಿಶಿಷ್ಠ ಜಾತಿ ಅಭ್ಯರ್ಥಿಗೆ ಮೀಸಲಾದ ಮಜ್ಜಾರು ಕ್ಷೇತ್ರದಲ್ಲಿ ಬಿಜೆಪಿಯಿಂದ ಮೋಹನ,ಕಾಂಗ್ರೆಸ್ನಿಂದ ಉಮೇಶ್ ಮಡ್ಯಡ್ಕ.
- ವಾರ್ಡ್ 13-ಪುಳಿಕುಕ್ಕು: ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಪುಳಿಕುಕ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕೃಷ್ಣ ನಾಯ್ಕ, ಬಿಜೆಪಿಯಿಂದ ಸದಾನಂದ ನಾಯ್ಕ ಅವರು ಅಂತಿಮ ಕಣದಲ್ಲಿದ್ದಾರೆ.