



ಕಡಬ: ತಾಲೂಕು ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ವತಿಯಿಂದ ಇಂದು 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಡಳಿತ ಸೌಧದ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು.
ಕಡಬ ತಹಶೀಲ್ದಾರ್ ಪ್ರಭಾಖರ ಖಜೂರೆ ಧ್ವಜಾರೋಹಣ ನೆರವೇರಿಸಿದರು.ಕಡಬ ಠಾಣಾ ಎಸ್ ಐ ಅಭಿನಂದನ್ ನೇತ್ರತ್ವದ ಪೊಲೀಸರು ರಾಷ್ಟ್ರ ದ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಸೇನಾಧಿಕಾರಿ ಸುಬ್ರಾಯ ಬೈಪಡಿತ್ತಾಯ ಅವರು ಮಾತನಾಡಿ ನಾವು ಪ್ರಾಮಾಣಿಕ ವಾಗಿ ಜನಸ್ನೇಹಿಯಾಗಿ ಕೆಲಸ ನಿರ್ವಹಿಸುವುದೇ ದೇಶ ಪ್ರೇಮದ ಭಾಗವಾಗಿದೆ. ಜನರ ಸೇವೆ ಭ್ರಷ್ಟಾಚಾರ ರಹಿತವಾಗಿ ಇರಬೇಕು .ಈ ಮೂಲಕ ದೇಶದ ,ನಾಡಿನ ಒಳಿತಿಗಾಗಿ ಮುಂದಾಗಬೇಕೆಂದರು.
ಕಡಬ ಪ.ಪಂ ಮುಖ್ಯಾಧಿಕಾರಿ ಲೀಲಾವತಿ ಸಹಿತ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.ಕಡಬ ಸರಕಾರಿ ಪ್ರೌಢ ಶಾಲಾ ಮಕ್ಕಳು ರಾಷ್ಟ್ರಗೀತೆ,ನಾಡಗೀತೆ ಪ್ರಸ್ತುತಪಡಿಸಿದರು.ಉಪ ತಹಶೀಲ್ದಾರ್ ಗೋಪಾಲ್ ಸ್ವಾಗತಿಸಿದರು, ಉದಯಕುಮಾರ್ ಧನ್ಯವಾದವಿತ್ತರು.ಕೌಶಿಕ್ ಕುಲ ನಿರೂಪಿಸಿದರು.ಕಡಬ ಪಟ್ಟಣ ಪಂಚಾತ್ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿ ಇರುವುದರಿಂದ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರ ಇರಲಿಲ್ಲ.