ಅದ್ದೂರಿ ಶೋಭಾಯಾತ್ರೆಗೆ ಸಾಕ್ಷಿಯಾದ ಕಡಬ ಪಟ್ಟಣ : ಜನಮನ ಸೆಳೆದ ಅಟ್ಟಿ ಮಡಕೆ ಒಡೆಯುವ ಸಾಹಸ ಪ್ರದರ್ಶನ

ಅದ್ದೂರಿ ಶೋಭಾಯಾತ್ರೆಗೆ ಸಾಕ್ಷಿಯಾದ ಕಡಬ ಪಟ್ಟಣ : ಜನಮನ ಸೆಳೆದ ಅಟ್ಟಿ ಮಡಕೆ ಒಡೆಯುವ ಸಾಹಸ ಪ್ರದರ್ಶನ

Kadaba Times News
0

ಕಡಬ ಟೈಮ್ಸ್ ( Kadaba Times) : ಮೊಸರು ಕುಡಿಕೆ ಉತ್ಸವದ ಭಾಗವಾಗಿ ಕಡಬ ಪೇಟೆಯಲ್ಲಿ ಅಟ್ಟಿ ಮಡಕೆ ಒಡೆಯುವ ಸಾಹಸ ಪ್ರದರ್ಶನದೊಂದಿಗೆ ಅದ್ದೂರಿ ಶೋಭಾಯಾತ್ರೆಗೆ ಕಡಬ ಪಟ್ಟಣದ ಜನತೆ  ಸಾಕ್ಷಿಯಾದರು.



ಹಿಂದೂಪರ ಸಂಘಟನೆಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಶೋಭಾಯಾತ್ರೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ರಘು ಬೆಳ್ಳಿಪ್ಪಾಡಿ ಅವರು ಚಾಲನೆ ನೀಡಿ ಶುಭ ಹಾರೈಸಿದರು. ಮೆರವಣಿಗೆಯುದ್ದಕ್ಕೂ ಗೊಂಬೆ ನೃತ್ಯ ಪ್ರದರ್ಶನ, ಬ್ಯಾಂಡ್ ವಾದ್ಯಗಳ ಸಂಗೀತ ರಸದೌತಣ ನೋಡುಗರ ಮನ ಸೆಳೆದವು  ವಿವಿಧ ಗ್ರಾಮಗಳ ಜನರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಗವಹಿಸಿದ ಯುವಕರ ತಂಡಕ್ಕೆ ಸ್ಪೂರ್ತಿ ತುಂಬಿದರು.


ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆ ಅಂಗವಾಗಿ ಕಡಬ ಪ್ರಖಂಡ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾ ವಾಹಿನಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಕರ್ಕೇರಾ ಉದ್ಘಾಟಿಸಿದರು.



ಶ್ರೀಕಂಠ ಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಹಳ್ಳಿ, ಉದ್ಯಮಿ ಶ್ರೀಧರ ಮಣಿಯಾಣಿ, ವಿ.ಹಿಂ.. ಕಡಬ ಪ್ರಖಂಡದ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು, ಪೂರ್ವಾಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಪ್ರಖಂಡದ ಕಾರ್ಯದರ್ಶಿ ಪ್ರಮೀಳಾಲೋಕೇಶ್ ಉಪಸ್ಥಿತರಿದ್ದರು. ಬಳಿಕ ಮಾತೃಶಕ್ತಿ ಮತ್ತು ದುರ್ಗಾ ವಾಹಿನಿ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳು ನಡೆಯಿತು.

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top