




ಕಡಬ: ವಾರದ ಹಿಂದೆ ಉಡುಪಿಯಲ್ಲಿ ಕಾರು ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಡಬ ತಾಲೂಕಿನ ಕುಂತೂರು ಗ್ರಾಮದ ಅನ್ನಡ್ಕ ನಿವಾಸಿ ಸತ್ಯನಾರಾಯಣ (47) ಮೃತಪಟ್ಟವರು.
ಉಡುಪಿಯಲ್ಲಿ
ಗಾರೆ ಕೆಲಸ ಮಾಡಿಕೊಂಡಿದ್ದು, ಜು. 9ರಂದು ಸಂಜೆ ಕೆಲಸ ಮುಗಿಸಿ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು
ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರು ಢಿಕ್ಕಿಯಾಗಿತ್ತು. ಮೃತರು ತಂದೆ, ಪತ್ನಿ ಹಾಗೂ ಮೂವರು
ಪುತ್ರರನ್ನು ಅಗಲಿದ್ದಾರೆ.