ಪತ್ರಿಕಾಗೋಷ್ಠಿ: ಭಾರತೀಯ ಮಜ್ದೂರು ಸಂಘದ ಪ್ರತಿಭಟನೆಗೂ ಬಿಜೆಪಿ ಪ್ರತಿಭಟನೆಗೂ ಸಂಬಂಧವಿಲ್ಲ

ಪತ್ರಿಕಾಗೋಷ್ಠಿ: ಭಾರತೀಯ ಮಜ್ದೂರು ಸಂಘದ ಪ್ರತಿಭಟನೆಗೂ ಬಿಜೆಪಿ ಪ್ರತಿಭಟನೆಗೂ ಸಂಬಂಧವಿಲ್ಲ

Kadaba Times News
0

ಕಡಬ ಟೈಮ್ಸ್ (KADABA TIMES) :  ಸುಳ್ಯದಲ್ಲಿ ಸೇರಿದಂತೆ ಜಿಲ್ಲೆಯಾದ್ಯಂತ ಭಾರತೀಯ ಮಜ್ದೂರು ಸಂಘದ ವತಿಯಿಂದ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಯುತ್ತಿದ್ದು,15 ದಿನಗಳಲ್ಲಿ ಸಮಸ್ಯೆ ಇತ್ಯರ್ಥವಾಗುವ ಭರವಸೆ ಜಿಲ್ಲಾ ಸಮಿತಿಗೆ ದೊರೆತಿದೆ ಎಂದು ಬಿ.ಎಂ.ಎಸ್.ತಾಲೂಕು ಸಮಿತಿಯ ಅಧ್ಯಕ್ಷ ಮಧುಸೂದನ್  ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.




ಕೆಂಪು ಕಲ್ಲು, ಮರಳು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಜು.14ರಂದು ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಗೆ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು, ಗ್ಯಾರೇಜ್ ಮಾಲಕರು, ವರ್ತಕರು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದಾರೆ. ಪಿ.ಡಬ್ಲ್ಯೂ ಡಿ ಗುತ್ತಿಗೆದಾರರ ಸಂಘ, ಇಂಜಿನಿಯರ್ ಅಸೋಸಿಯೇಷನ್, ಇಲೆಕ್ಟ್ರಕಲ್ ಗುತ್ತಿಗೆದಾರರ ಸಂಘ, ಪೈಂಟರ್ ಅಸೋಸಿಯೇಷನ್ ನವರು ಸಹಕಾರ ನೀಡಿದ್ದಾರೆ.  ನಮ್ಮ ಮನವಿಯನ್ನು ಕಾರ್ಮಿಕ ಇಲಾಖೆಗೆ ಸಲ್ಲಿಸಿದ್ದೇವೆ ಎಂದು ಹೇಳಿದರು. ಕಾರ್ಮಿಕ ಇಲಾಖೆಯಲ್ಲಿ ಲಕ್ಷಾಂತರ ಹಣವಿದೆ.ಆದರೆ ಕಾರ್ಮಿಕರ ಕಲ್ಯಾಣಕ್ಕೆ ಸದುಪಯೋಗವಾಗುತ್ತಿಲ್ಲ.ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ಶಿಪ್ ಸಿಗುತ್ತಿಲ್ಲ. ಈ ಹಣವನ್ನು ಸಂಚಾರಿ ಆರೋಗ್ಯ ಬಸ್ ಸೇರಿದಂತೆ ಉಪಯೋಗವಿಲ್ಲದ ಯೋಜನೆಗೆ ಬಳಸುತ್ತಿದ್ದಾರೆ.  ಆಯುಷ್ಮಾನ್ ಯೋಜನೆ ಇರುವಾಗ ಸಂಚಾರಿ ಬಸ್ ನ ಅವಶ್ಯಕತೆ ಇಲ್ಲ ಎಂದ ಅವರು ದೊಡ್ಡ ದೊಡ್ಡ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಸಂಕಷ್ಟದ ಸಂದರ್ಭದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಬೇಕು ಎಂದು ಹೇಳಿದರು.ಕಾರ್ಮಿಕರು ಬಿ.ಎಂ.ಎಸ್ ಕಾರ್ಡ್ ಗಾಗಿ ನೋಂದಾವಣೆ ಮಾಡಿಸಿಕೊಳ್ಳಬೇಕು. ಕಾರ್ಮಿಕರಿಗೆ ಅನುಕೂಲವಾಗುವಂತೆ ಸುಳ್ಯದಲ್ಲಿ ಆಧಾರ್ ಕೇಂದ್ರ ಇರಬೇಕು ಎಂದು ಆಗ್ರಹಿಸಿದರು


ಭಾರತೀಯ ಮಜ್ದೂರು ಸಂಘದ ಪ್ರತಿಭಟನೆಗೂ ಬಿಜೆಪಿ ಪ್ರತಿಭಟನೆಗೂ ಸಂಬಂಧವಿಲ್ಲ :ಸುಳ್ಯದ ಖಾಸಗಿ ಬಸ್ ನಿಲ್ಲಾಣದ ಬಳಿ ನಮ್ಮ ಸಂಘಟನೆ ಮತ್ತು ಬಿಜೆಪಿ ಪಕ್ಷದ ವತಿಯಿಂದ ಕಾರ್ಮಿಕರ ಸಮಸ್ಯೆ ಈಡೇರಿಕೆಗಾಗಿ ಪ್ರತಿಭಟನೆ ನಡೆದಿದ್ದು, ಬಿ.ಎಂ.ಎಸ್. ಹಾಗೂ ಬಿಜೆಪಿ ಪ್ರತಿಭಟನೆಗೆ ಸಂಬಂಧವಿಲ್ಲ ಎಂದು ಮಧು ಸೂದನ್ ಹೇಳಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷರು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ಷೇಪಣಾರ್ಹ ಪದ ಬಳಕೆ ಮಾಡಿರುವುದಾಗಿ ಕಾಂಗ್ರೆಸ್ ದೂರು ನೀಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಇದರ ಬಗ್ಗೆ ಸ್ಪಷ್ಟನೆ ಕೇಳಿದ್ದೇವೆ .  ನಮ್ಮ ಸಂಘಟನೆಯ ಹೆಸರು ದೂರಿನಲ್ಲಿ ಇಲ್ಲ ಎಂದ ಅವರು ನಾವು ನಮ್ಮ ಸಂಘಟನೆಯ ಪ್ರತಿಭಟನೆ ಮಾಡಲು ವೇದಿಕೆ ಹಾಕಿ 11 ಗಂಟೆಗೆ ಸಮಯ ನಿಗದಿ ಮಾಡಿದ್ದೆವು. ಆದರೆ ಬಿಜೆಪಿಯವರು ಅದಕ್ಕಿಂತ ಮೊದಲೇ ಆ ವೇದಿಕೆಯನ್ನು ಉಪಯೋಗಿಸಿಕೊಂಡು ಪ್ರತಿಭಟನೆ ಮಾಡಿದ್ದಾರೆ.   ನಾವು ಯಾವನೇ ಒಬ್ಬ ಬಿಜೆಪಿ ಪಕ್ಷದವರನ್ನು ವೇದಿಕೆಗೆ ಕರೆಯಲಿಲ್ಲ. ಕ್ಷೇತ್ರದ  ಶಾಸಕರು ಎಂಬ ನೆಲೆಯಲ್ಲಿ ಶಾಸಕರನ್ನು ಕರೆಸಿ ಮಾತನಾಡಿಸಿದ್ದೇವೆ. ಮೈಕ್ ಅನೌನ್ಸ್ ಎರಡೂ ಕಡೆಗೂ ಒಬ್ಬರೇ, ಒಂದೇ ಜೀಪಿನಲ್ಲಿ ಮಾಡಿದುದರಿಂದ ಒಂದೇ ಸಭೆಯೆಂಬ ಗೊಂದಲ ನಿರ್ಮಾಣವಾಗಿದೆ. ಬಿಜೆಪಿ ಪಕ್ಷಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ.  ನಮ್ಮ ಸಂಘಟನೆಯಲ್ಲಿ ಬೇರೆ ಪಕ್ಷದ ಕಾರ್ಮಿಕರೂ ಇದ್ದಾರೆ. ಬಿಜೆಪಿಯ ಯಡಿಯೂರಪ್ಪ, ಬೊಮ್ಮಾಯಿ ಸರಕಾರ ಇದ್ದಾಗಲೂ ನಮ್ಮ ಬೇಡಿಕೆ ಈಡೇರಿಕೆಗಾಗಿ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ ಎಂದು ಅವರು ಹೇಳಿದರು.


ಸಂಘಟನಾ ಕಾರ್ಯದರ್ಶಿ ಮಾತನಾಡಿ ನಮ್ಮ ಜಿಲ್ಲಾ ಸಮಿತಿಯ ಪ್ರಮುಖರು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿದ್ದು, 15 ದಿನಗಳಲ್ಲಿ ಸಮಸ್ಯೆ ಇತ್ಯರ್ಥವಾಗುವ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ತೋಟಪ್ಪಾಡಿ, ಉಪಾಧ್ಯಕ್ಷ ಲವಕುಮಾರ್ ದುಗ್ಗಲಡ್ಕ, ಜತೆ ಕಾರ್ಯದರ್ಶಿ ವಿಶುಕುಮಾರ್, ಸದಸ್ಯ ಹರೀಶ್ ಕಾಯರ್ತೋಡಿ ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top