




ಕಡಬ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 75ರ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ಜುಲೈ 17, 2025ರಂದು ಬೆಳಗ್ಗೆ ಗುಡ್ಡ ಕುಸಿದ ಘಟನೆಯಿಂದಾಗಿ ಹೆದ್ದಾರಿಯು ಸಂಪೂರ್ಣವಾಗಿ ಬಂದ್ ಆಗಿದೆ.
ಪ್ರಸ್ತುತ,
ಸ್ಥಳದಲ್ಲಿ ಮಣ್ಣು ತೆಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ಹೆದ್ದಾರಿ
ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾರ್ಯ ಆರಂಭಿಸಿದ್ದಾರೆ.
ಮಣ್ಣು ತೆಗೆಯುವ ಕಾರ್ಯವು ಮಧ್ಯಾಹ್ನದವರೆಗೆ ಮುಂದುವರಿಯಲಿದೆ
ಎಂದು ತಿಳಿದುಬಂದಿದೆ.ಹೀಗಾಗಿ ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಉಪ್ಪಿನಂಗಡಿ-
ಕಡಬ ಮಾರ್ಗವಾಗಿ ಕೈಕಂಬ ಮೂಲಕ ಗುಂಡ್ಯ ಹೆದ್ದಾರಿಯನ್ನು ತಲುಪಬಹುದಾಗಿದೆ.ಅಥವಾ ನೆಲ್ಯಾಡಿಯಿಂದ ಬಲ್ಯ
ಮಾರ್ಗವಾಗಿ ಕಡಬ ರಸ್ತೆ ಸಂಪರ್ಕಿಸಬಹುದು.