ಕಡಬ: ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆ ಸರಿಯಿಲ್ಲ: ಗ್ರಾಮಸ್ಥ X( ಎಕ್ಸ್) ನಲ್ಲಿ ನೀಡಿದ ದೂರಿಗೆ ರೈಲ್ವೇ ಅಧಿಕಾರಿಗಳ ತ್ವರಿತ ಸ್ಪಂದನೆ

ಕಡಬ: ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆ ಸರಿಯಿಲ್ಲ: ಗ್ರಾಮಸ್ಥ X( ಎಕ್ಸ್) ನಲ್ಲಿ ನೀಡಿದ ದೂರಿಗೆ ರೈಲ್ವೇ ಅಧಿಕಾರಿಗಳ ತ್ವರಿತ ಸ್ಪಂದನೆ

Kadaba Times News

ಕಡಬ ಟೈಮ್(ಪ್ರಮುಖ ಸುದ್ದಿ):  ಕಡಬ: ಮಂಗಳೂರು-ಬೆಂಗಳೂರು ರೈಲ್ವೇ ಮಾರ್ಗದ ಎಡಮಂಗಲದಲ್ಲಿ   ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಒದಗಿಸುವ ರಸ್ತೆಯಲ್ಲಿ ಪ್ರಯಾಣಿಕರಿಗೆ ಸಂಚರಿಸಲು ತೊಂದರೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರೊಬ್ಬರು X (ಎಕ್ಸ್) ಸಾಮಾಜಿಕ್ ಖಾತೆಯಲ್ಲಿ  ನಲ್ಲಿ ನೀಡಿದ ದೂರಿಗೆ ರೈಲ್ವೇ ಇಲಾಖೆ ತುರ್ತಾಗಿ ಸ್ಪಂದಿಸಿದೆ.  



ಕಡಬ ತಾಲೂಕಿನ  ಎಡಮಂಗಲ ಗ್ರಾಮದ ಬಾಕಿಜಾಲು ನಿವಾಸಿ ವಿನಯಚಂದ್ರ ಅವರು ಜುಲೈ 7 ರಂದು ಕೆಲ ಗ್ರಾಮಸ್ಥರು ರಸ್ತೆ ದುರಸ್ತಿ ಮಾಡುತ್ತಿರುವ ವೀಡಿಯೋವನ್ನು  X (ಎಕ್ಸ್) ಖಾತೆಯಲ್ಲಿ  ಹಾಕಿ  ರೈಲ್ವೇ ಇಲಾಖೆಯ ವಿಭಾಗೀಯ ರೈಲ್ವೇ ವ್ಯವಸ್ಥಾಪಕರಿಗೆ   ಟ್ಯಾಗ್ (Tag) ಮಾಡಿದ್ದರು.



 ಇದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಗಮನ ಹರಿಸಿ  ಇಂದು (ಜುಲೈ 8ರಂದು) ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಜೆಸಿಬಿ ಬಳಸಿ ರಸ್ತೆಯನ್ನು ದುರಸ್ತಿ ಮಾಡುತ್ತಿರುವುದಲ್ಲದೆ ಜಲ್ಲಿ ಹಾಕಿ ಗುಂಡಿಗಳನ್ನು ಮುಚ್ಚುತ್ತಿರುವುದು ಕಂಡು ಬಂದಿದೆ.


ಪ್ರಯಾಣಿಕರ ಪರವಾಗಿ ದೂರು ನೀಡಿದ ಕೂದಲೇ   ತ್ವರಿತ ಕ್ರಮ ಕೈಗೊಂಡ ರೈಲ್ವೆ ಇಲಾಖೆಯ ನಡೆಗೆ ರೈಲ್ವೇ ಬಳಕೆದಾರರ ವೇದಿಕೆ, ಗ್ರಾಮಸ್ಥರು  ಮೆಚ್ಚುಗೆ ಸೂಚಿಸಿ ಅಧಿಕಾರಿಗಳ ಕೆಲಸವನ್ನು   ಶ್ಲಾಘಿಸಿದ್ದಾರೆ. 


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top