




ಕಡಬ ಟೈಮ್ಸ್ (ಪ್ರಮುಖ ಸುದ್ದಿ): ಕಡಬ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಕಡಬ ತಾಲೂಕು ಘಟಕದ ವತಿಯಿಂದ ಜುಲೈ 12, ಶನಿವಾರದಂದು ನೂಜಿಬಾಳ್ತಿಲದ ಬೆಥನಿ ಪದವಿ ಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವು ಪೂರ್ವಾಹ್ನ 10 ಗಂಟೆಗೆ ಆರಂಭವಾಗಲಿದೆ.
ಕಾರ್ಯಕ್ರಮವನ್ನು ಮಂಗಳೂರು ವೃತ್ತದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಪರೀಕ್ಷಾರ್ಥಿ) ಕು| ಹಸ್ತಾ ಶೆಟ್ಟಿ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಬೆಥನಿ ಪದವಿಪೂರ್ವ ಕಾಲೇಜಿನ ನಿರ್ದೇಶಕ ರೆ.ಫಾ. ಆ್ಯಂಟನಿ
ಓಐಸಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ಘಟಕದ ಅಧ್ಯಕ್ಷ ನಾಗರಾಜ್ ಎನ್.ಕೆ. ವಹಿಸಲಿದ್ದು, ಬೆಥನಿ ಕಾಲೇಜಿನ ಪ್ರಾಂಶುಪಾಲ ಜಾರ್ಜ್ ಟಿ.ಎಸ್ ಗೌರವ ಉಪಸ್ಥಿತಿಯಲ್ಲಿ ಇರಲಿದ್ದಾರೆ.ಕಾರ್ಯಕ್ರಮದಲ್ಲಿ ನೂಜಿಬಾಳ್ತಿಲದ ಹಿರಿಯ ಪತ್ರಿಕಾ ವಿತರಕರಾದ ಜಯಕುಮಾರ್ ಜೈನ್, ಕಲ್ಲುಗುಡ್ಡೆ ಅವರನ್ನು ಗೌರವಿಸುವ ಸಮಾರಂಭ ನಡೆಯಲಿದೆ.
ಇದಲ್ಲದೆ, "ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ" ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದವೂ ನಡೆಯಲಿದ್ದು, ಕು| ಹಸ್ತಾ ಶೆಟ್ಟಿ ಅವರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಲಭಿಸಲಿದೆ. ಸಾರ್ವಜನಿಕರು ಹಾಗೂ ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಕಡಬ ಹಾಗೂ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![]() |
ಆಮಂತ್ರಣ ಪತ್ರಿಕೆ |