ಕಡಬದಲ್ಲಿ ಒಟ್ಟು ಸೇರಿದ ಅಡಿಕೆ ವರ್ತಕರು: ತಾಲೂಕು ಸಮಿತಿ ರಚನೆ

ಕಡಬದಲ್ಲಿ ಒಟ್ಟು ಸೇರಿದ ಅಡಿಕೆ ವರ್ತಕರು: ತಾಲೂಕು ಸಮಿತಿ ರಚನೆ

Kadaba Times News

 ಕಡಬ: ಅಡಿಕೆ ವರ್ತಕರ ವಿರುದ್ದ ಜಿಎಸ್ಟಿ ನೆಪದಲ್ಲಿ ತೆರಿಗೆ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದರೆಂದು ಅಡಿಕೆ ವರ್ತಕರು ಸಂಘಟಿತ ಹೋರಾಟಕ್ಕೆ ಮುಂದಾಗಿದ್ದಾರೆ.   ಈ ಹಿನ್ನಲೆಯಲ್ಲಿ ಸದೃಢ ಜಿಲ್ಲಾ ಸಮಿತಿ  ರಚಿಸುವ ಬಗ್ಗೆ ಕಡಬದ ಅಂಬೇಡ್ಕರ್ ಭವನದಲ್ಲಿ  ಜುಲೈ22 ರಂದು ನಡೆದ ವರ್ತಕರ ಸಭೆಯಲ್ಲಿ ತಿರ್ಮಾನಿಸಲಾಗಿದೆ.



ಸಭೆಯಲ್ಲಿ ವರ್ತಕರ ಪ್ರಮುಖರಾದ ಪ್ರಶಾಂತ್ ಶೆಟ್ಟಿ ಮಾತನಾಡಿ, ಅತೀ ಹೆಚ್ಚು ಜಿಎಸ್ಟಿ ಪಾವತಿಸುವ ಅಡಿಕೆ ವರ್ತಕರು ವಾಣಿಜ್ಯ ತೆರಿಗೆ ಅಧಿಕಾರಿಗಳು, ಎಪಿಎಂಸಿ ಸ್ಕ್ಯಾಡ್, ಪೊಲೀಸ್ ಅಧಿಕಾರಿಗಳಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ, ನಾವು ರೈತಾಪಿ ಜನರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ಮಾಡಿಕೊಂಡು ಸರಕಾರಕ್ಕೆ ತೆರಿಗೆ ಪಾವತಿ ಮಾಡುತ್ತಿದ್ದೇವೆ. ಇಷ್ಟೆಲ್ಲ ಇದ್ದರೂ ನಮ್ಮನ್ನು ಅಧಿಕಾರಿಗಳು ಕಳ್ಳರಂತೆ ನೋಡುತ್ತಿರುವುದು ದುರದೃಷ್ಟಕರ ನಾವು ಭಯದಿಂದಲೇ ವ್ಯಾಪಾರ ಮಾಡುವಂತಾಗಿದೆ, ನಾವು ಕೂಡ ಹಲವಾರು ಸಮಸ್ಯೆಗಳನ್ನು ಎದುರಿಸಿಕೊಂಡೆ ವ್ಯಾಪಾರ ಮಾಡುತ್ತಿದ್ದೇವೆ, ಈ ಸಮಸ್ಯೆಗಳನ್ನು ನಿವಾರಿಸಲು ವರ್ತಕರು ಸಂಘಟಿತರಾಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು. ‌



ರೂಪೇಶ್ ರೈ ಆಲಿಮಾರ್ ಅವರು ಮಾತನಾಡಿ, ವರ್ತಕರ ಸಮಸ್ಯೆಗಳ ಬಗ್ಗೆ ನಾವು ಒಂದು ಕಡೆ ಸೇರಿ ಪರಿಹರಿಸಬೇಕಾಗಿದೆ, ಇದಕ್ಕೆ ಸಂಘಟನೆ ಬಹಳ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಪ್ರಮುಖರು ಸಂಚರಿಸಿ ತಾಲೂಕು ಸಮಿತಿಗಳನ್ನು ರಚಿಸಲಾಗಿದೆ. ಮುಂದೆ ತಾಲೂಕು ಸಮಿತಿಗಳ ಮೂಲಕ ಜಿಲ್ಲಾ ಸಮಿತಿಗಳನ್ನು ರಚಿಸಲಾಗುವುದು, ಅನುಭವಿ ವಕೀಲರನ್ನು ನೇಮಿಸಿಕೊಂಡು ತೆರಿಗೆಯ ಮಾಹಿತಿ ಸೇರಿದಂತೆ ಸಂಘದ ನಿಯಾಮವಳಿಗಳನ್ನು ರೂಪಿಸಲಾಗುವುದು ಎಂದರು. ಪ್ರಮುಖರಾದ ಬಾಲಕೃಷ್ಣ ಶೆಟ್ಟಿ ಬೆಳ್ತಂಗಡಿ, ಸಂಶುದ್ದೀನ್ ಜಾರಿಗೆಬೈಲು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಧರ್ಣಪ್ಪ ಗೌಡ ಅಂಬುಲ ಕಾಣಿಯೂರು ವಂದನಾರ್ಪಣೆ ಸಲ್ಲಿಸಿದರು. ಸಭೆಯಲ್ಲಿ ಕಡಬ ತಾಲೂಕಿನ ಎಲ್ಲಾ ಅಡಿಕೆ ವರ್ತಕರು ಭಾಗವಹಿಸಿದ್ದು ತಮ್ಮ ಸಲಹೆ ನೀಡಿದರು.

ಕಡಬ ತಾಲೂಕು ಸಮಿತಿ ರಚನೆ: ಸಭೆಯಲ್ಲಿ ಕಡಬ ತಾಲೂಕು ಅಡಿಕೆ ವರ್ತಕರ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಖಲಂದರ್ ಎ.ಕೆ. ಕಾರ್ಯದರ್ಶಿಯಾಗಿ ಧರ್ಣಪ್ಪ ಗೌಡ ಅಂಬುಲ ಕಾಣಿಯೂರು, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಪಡ್ಪಿನಂಗಡಿ, ಜತೆ ಕಾರ್ಯದರ್ಶಿಯಾಗಿ ರಜಾಕ್ ನ್ಯಾಷನಲ್ ಸುಫಾರಿ, ಕೋಶಾಧಿಕಾರಿಯಾಗಿ ಇಬ್ರಾಹಿಂ ಇಫ್ರಾ ಟ್ರೇಡರ್ಸ್ ಅವರುಗಳು ಆಯ್ಕೆಯಾಗಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top