ಕಡಬ ತಾಲೂಕಿನಾದ್ಯಂತ ಕೆಲಸ ನಿರ್ವಹಿಸುವ ಹೊರ ರಾಜ್ಯದ ಕಾರ್ಮಿಕರನ್ನು ಕಡ್ಡಾಯ ನೋಂದಣಿ ಮಾಡಿಕೊಳ್ಳಬೇಕು -ಭಾರತೀಯ ಮಜ್ದೂರ್ ಸಂಘ ಆಗ್ರಹ

ಕಡಬ ತಾಲೂಕಿನಾದ್ಯಂತ ಕೆಲಸ ನಿರ್ವಹಿಸುವ ಹೊರ ರಾಜ್ಯದ ಕಾರ್ಮಿಕರನ್ನು ಕಡ್ಡಾಯ ನೋಂದಣಿ ಮಾಡಿಕೊಳ್ಳಬೇಕು -ಭಾರತೀಯ ಮಜ್ದೂರ್ ಸಂಘ ಆಗ್ರಹ

Kadaba Times News

 ಕಡಬ ಟೈಮ್ (ಪ್ರಮುಖ ಸುದ್ದಿ) : ಕಟ್ಟಡ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವ ವನ್ನು ತಪ್ಪಿಸಿ ಕಾರ್ಮಿಕರಿಗೆ ಕೆಲಸ ಸಿಗುವಂತೆ ಮಾಡಬೇಕು ಹಾಗೂ ಹೊರ ರಾಜ್ಯದ ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಭಾರತೀಯ ಮಜ್ದೂರ್ ಸಂಘದ ಕಡಬ ತಾಲೂಕು  ಆಗ್ರಹಿಸಿದೆ.



ಸಂಘದ ಪ್ರಮುಖರು ಕಡಬ ತಹಸೀ ಲ್ದಾರ್ ಪ್ರಭಾಕರ ಹುಜೂರೆ ಮೂಲಕ  ಮುಖ್ಯ ಮಂತ್ರಿಯವರಿಗೆ  ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಹೊಸ ನೀತಿ ಜಾರಿಯಾದ ಬಳಿಕ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ ಗಳಿಗೆ ಕೆಂಪು ಕಲ್ಲು ಮತ್ತು ಮರಳಿನ ಅಭಾವ ಸೃಷ್ಟಿಯಾಗಿದೆ. ಕಾರ್ಮಿಕರಿಗೆ ಕೆಲಸಎಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಮಾತ್ರವಲ್ಲದೆ ಕಳೆದ 4 ವರ್ಷಗಳಿಂದ ಕಾರ್ಮಿಕರಿಗೆ ಸರಿಯಾಗಿ ವೃದ್ಧಾಪ್ಯ ವೇಶನ, ಪಿಂಚಣಿ ಸಿಗುತ್ತಿಲ್ಲ, ಕಾರ್ಮಿಕ ರಿಗೆ ಅನಗತ್ಯ ಹೆಲ್ತ್ ಕ್ಯಾಂಪ್, ಟ್ರೈನಿಂಗ್ ಕ್ಯಾಂಪ್‌ಗಳನ್ನು ಮಾಡಿ ಕಟ್ಟಡ ಮಂಡಳಿ ಹಣ ದುರುಪಯೋಗಪಡಿಸಿಕೊಳ್ಳುವುದನ್ನು  ತಡೆದುಬೇಕು.  ಕಡಬ ತಾಲೂಕಿನಾದ್ಯಂತ ಕೆಲಸ ನಿರ್ವಹಿಸುವ ಹೊರ ರಾಜ್ಯದ ಕಾರ್ಮಿಕರನ್ನು ಕಡ್ಡಾಯ  ನೋಂದಣಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಹತ್ತು ದಿನಗಳ ಒಳಗೆ ನಮ್ಮ ಮನವಿಗೆ ಸ್ಪಂದೆನ ದೊರೆಯುರಿದ್ದಲ್ಲಿ ಬಿ.ಎಂ.ಎಸ್. ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಲಾಯಿತು. ಕಡಬ ತಹಸೀಲ್ದಾರ್ ಪ್ರಭಾಕರ ಸುಜೂರೆ ಮನವಿ ಸ್ವೀಕರಿಸಿದರು. ಇದಕ್ಕೂ ಮುನ್ನ ಕಡಬ ಠಾಣಾಧಿಕಾರಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.


ಬಿ.ಎಂ.ಎಸ್. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ ಕಡಬ ತಾಲೂಕು ಅಧ್ಯಕ್ಷ ಚಂದ್ರಶೇಖರ ಮರ್ಧಾಳ, ಸುಬ್ರಹ್ಮಣ್ಯ ವಲಯಾಧ್ಯಕ್ಷ ಗಿರೀಶ್ ಆಚಾರ್, ಜಿಲ್ಲಾ ಸಹ ಕಾರ್ಯದರ್ಶಿ ಪ್ರಮೋದ್ ರೈ ಕಡಬ ಸಹಿತ ಪ್ರಮುಖರಿದ್ದರು.

Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top