




ಕಡಬದಲ್ಲಿ ರಾಮಸೇನಾ ಸಂಘಟನೆ ಪತ್ರಿಕಾಗೋಷ್ಠಿ
ಕಡಬ ಟೈಮ್ (ಪ್ರಮುಖ ಸುದ್ದಿ): ಪುತ್ತೂರಿನಲ್ಲಿ ಪ್ರೀತಿಯ ನೆಪದಲ್ಲಿ ಯುವತಿ ಗರ್ಭಿಣಿ ಪ್ರಕರಣದಲ್ಲಿ ಬಗ್ಗೆ ಹಿಂದೂ ಸಮಾಜದ ಸಂಘಟನೆಗಳು ಮುಖಂಡರು ಯಾಕೆ ವಿರೋಧಿಸುತ್ತಿಲ್ಲ, ಒಂದು ವೇಳೆ ಆ ಹೆಣ್ಣು ಮಗಳಿಗೆ ಇತರ ಧರ್ಮದವರಿಂದ ಅನ್ಯಾಯ ಆಗುತ್ತಿದ್ದರೆ ಸುಮ್ಮನೆ ಇರುತ್ತಿದ್ದರೆ? ಸಣ್ಣ ಸಣ್ಣ ವಿಷಯಕ್ಕೂ ಉಗ್ರ ಹೋರಾಟ ಮಾಡುವ ಮುಖಂಡರುಗಳು ಈಗ ಎಲ್ಲಿ ಹೋಗಿದ್ದಾರೆ, ಹಿಂದೂ ಸಮಾಜದ ಹೆಣ್ಣು ಮಗಳಿಗೆ ಅನ್ಯಾಯ ಆದಾಗ ಅನ್ಯಾಯ ಮಾಡಿದವನ್ನು ಯಾವನೇ ಆಗಿರಲಿ ಆತನಿಂದ ನ್ಯಾಯ ಒದಗಿಸಿ ಕೊಡಬೇಕಾಗಿರುವುದು ಇವರ ಧರ್ಮವಲ್ಲವೇ ಎಂದು ರಾಮಸೇನಾ ಪುತ್ತೂರು ಜಿಲ್ಲಾಧ್ಯಕ್ಷ ಗೋಪಾಲ್ ಅವರು ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನಿಸಿದ್ದಾರೆ.
ಆಕೆ ಗರ್ಭಿಣಿಯಾದ ವಿಚಾರ ತಿಳಿದ ಬಳಿಕ ಮದುವೆಯಾಗುತ್ತೇನೆ ಎಂದೂ ಮಾತು ಕೊಟ್ಟು, ಇದೀಗ ಮದುವೆ ಆಗುವುದಿಲ್ಲ ಎಂದು ಹೇಳಿ ಆರೋಪಿ ನಾಪತ್ತೆಯಾಗಿರುತ್ತಾನೆ. ಮಾತನಾಡಬೇಕಾದವರು ಸಂಘಟನೆ ಈ ಒಂದು ಕಡೆಯಾದರೆ, ಇಂತಹ ಘಟನೆ ನಡೆದರೂ ಮೌನವಹಿಸಿರುವುದು ಮಾತ್ರ ವಿಪರ್ಯಾಸವಾಗಿದೆ. ರಾಮಸೇನೆ ಘಟನೆಯನ್ನು ಉಗ್ರವಾಗಿ ಖಂಡಿಸುವುದು ಮಾತ್ರವಲ್ಲದೆ, ಕೂಡಲೇ ಆರೋಪಿಯನ್ನು ಬಂಧಿಸಿ ಕಾನೂನು ರೀತಿಯಲ್ಲಿ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹ ಮಾಡುತ್ತಿದ್ದೇವೆ.
ಹಿಂದೂ ಸಮಾಜದ ಹೆಣ್ಣು ಮಗಳಿಗೆ ಪ್ರತಿಷ್ಠಿತ ವ್ಯಕ್ತಿಯೆಂದು ಹೇಳಿಕೊಳ್ಳುತ್ತಿದ್ದ ವ್ಯಕ್ತಿಯ ಮಗ ಕೃಷ್ಣ ಜೈ ರಾವ್ ಅವನಿಂದ ಅನ್ಯಾಯವಾಗಿದೆ ಈ. ಇಂದು ಆ ಹೆಣ್ಣು ಮಗಳ ತಾಯಿ ಬೀದಿಗೆ ಬಂದು ನ್ಯಾಯ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಯಾರು ಕಾರಣ, ದೂರದ ಡೆಲ್ಲಿಯಲ್ಲಿ ಅತ್ಯಾಚಾರ ಆದಾಗ ಇಲ್ಲಿ ಆಕಾಶವೇ ಕಳಚಿ ಬಿದ್ದ ಹಾಗೆ ಮಾಡುವ, ಪ್ರತಿಭಟಿಸುವ ನಾಯಕರು ಇವಾಗ ಎಲ್ಲಿ ಹೋಗಿದ್ದಾರೆ, ಇದು ಹಿಂದೂ ಧರ್ಮಕ್ಕೆ ಮಾಡಿರುವ ದ್ರೋಹವಲ್ಲವೆ, ಪೋಲಿಸ್ ಇಲಾಖೆ ಕೂಡ ಅಪರಾಧಿಯನ್ನು ಬಂಧಿಸುವ ಬದಲು ಯಾರ ಮಾತನ್ನು ಕೇಳಿ ಕುಳಿತಿದೆ ಎನ್ನುವ ನೂರಾರು ಪ್ರಶ್ನೆಗಳು ಉದ್ಭವಿಸಿದೆ.
ಕೂಡಲೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು, ಆ ಹೆಣ್ಣು ಮಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ರಾಮಸೇನೆ ವತಿಯಿಂದ ಆಗ್ರಹಿಸುತ್ತಿದ್ದೇವೆ, ಇಲ್ಲದಿದ್ದರೆ ಸಮಾನ ಮನಸ್ಕರೊಂದಿಗೆ ಸೇರಿ ಪ್ರತಿಭಟನೆ ಮಾಡಲಿದ್ದೇವೆ ಎಂಬ ಎಚ್ಚರಿಕೆ ನೀಡಿದ್ದಾರೆ. ಶಶಿಧರ್ ದೇವಸ್ಯ ಉಪಸ್ಥಿತರಿದ್ದರು.