






ಕಡಬ ಟೈಮ್ಸ್ ,ಪ್ರಮುಖ ಸುದ್ದಿ: ಸುಬ್ರಹ್ಮಣ್ಯ: ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದ ನಡುವೆ ಬರುವ ಎಡಕುಮಾರಿ-ಶಿರಿಬಾಗಿಲು ನಡುವೆ ಗುಡ್ಡ ಕುಸಿದು ಮೆಟೀರಿಯಲ್ ರೈಲ್ವೆ ಹಳಿ ಮೇಲೆ ಬಂಡೆಗಳು ಬಿದ್ದ ಪರಿಣಾಮ ರೈಲು ಸಂಚಾರದ ಸಮಯದಲ್ಲಿ ವ್ಯತ್ಯಯವಾಗಿದೆ.
ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್
ಕಡಗರವಳ್ಳಿಗೆ ಬೆಳಗ್ಗೆ 3:40ಕ್ಕೆ ಆಗಮಿಸಿದ್ದು, ತಡವಾಗಿ ಹೊರಡಲಿದೆ. ಹಾಗೇ ರೈಲು ಸಂಖ್ಯೆ
16585 SMVT ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ಸಕಲೇಶಪುರಕ್ಕೆ ಬೆಳಗ್ಗೆ 3:10ಕ್ಕೆ, ರೈಲು
ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಕಲೇಶಪುರಕ್ಕೆ ಬೆಳಗ್ಗೆ
6:26ಕ್ಕೆ ಆಗಮಿಸಿದ್ದು, ಇವೆರಡು ಕೂಡ ತಡವಾಗಿ ಹೊರಡಲಿದೆ. ಹೀಗಾಗಿ ರೈಲಿನಲ್ಲಿರುವ ಪ್ರಯಾಣಿಕರಿಗೆ
ಕುಡಿಯುವ ನೀರು, ಬಿಸ್ಕೆಟ್, ಉಪಹಾರ ಮತ್ತು ಚಹಾ ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ
ತಿಳಿಸಿದೆ.
ಪ್ರಯಾಣಿಕರು NTES ಅಥವಾ Where is My Train ಅಪ್ಲಿಕೇಶನ್ ಮೂಲಕ ತಮ್ಮ ರೈಲನ್ನು ಲೈವ್ ಆಗಿ ಟ್ರ್ಯಾಕ್ ಮಾಡಬಹುದು. ಮಾತ್ರವಲ್ಲದೆ ತುರ್ತು ಸಂದರ್ಭದಲ್ಲಿ @RailwaySevaಗೆ ಟ್ವೀಟ್ ಮಾಡುವುದು ಅಥವಾ 139 ನಂಬರಿಗೆ ಕರೆ ಮಾಡಬಹುದು ಎಂದು ನೈಋತ್ಯ ರೈಲ್ವೆ ಹುಬ್ಬಳ್ಳಿಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ಅವರು ತುರ್ತು ಪ್ರಕಟಣೆ ಹೊರಡಿಸಿದ್ದಾರೆ.