






ಕಡಬ ಟೈಮ್ಸ್ ,ಪ್ರಮುಖ ಸುದ್ದಿ,: ಆಲಂಕಾರು: ರಸ್ತೆ ಅಡ್ಡ ದಾಟುತ್ತಿದ್ದ ಹಾವು ನೋಡಿ ರಿಕ್ಷಾ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ಚರಂಡಿಗೆ ಬಿದ್ದು ಪ್ರಯಾಣಿಕರೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಾಂತಿಮೊಗರು ಸಮೀಪದ ಕೊಂಡಾಡಿ ಎಂಬಲ್ಲಿ ಜೂ.18ರಂದು ಸಂಜೆ ನಡೆದಿದೆ.
ಆಲಂಕಾರಿನಿಂದ ಶಾಂತಿಮೊಗರು ಕಡೆಗೆ ಮಹಮ್ಮದ್ ಮುಸ್ತಾಫ
ಎಂಬವರು ರಿಕ್ಷಾ ಚಲಾಯಿಸಿಕೊಂಡು ಬಂದಿದ್ದು ಆಲಂಕಾರು ಗ್ರಾಮದ ಶಾಂತಿಮೊಗರು ಕೊಂಡಾಡಿ ಎಂಬಲ್ಲಿ ತಲುಪುತ್ತಿದ್ದಂತೆ
ರಸ್ತೆ ಅಡ್ಡ ದಾಟುತ್ತಿದ್ದ ಹಾವು ನೋಡಿ ಹಠಾತ್ ಬ್ರೇಕ್ ಹಾಕಿದ್ದಾರೆ.
ದಿಢೀರ್ ಬ್ರೇಕ್ ಹಾಕಿದ ಕಾರಣ ರಿಕ್ಷಾ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲ ಬದಿಯ ಚರಂಡಿಗೆ ಬಿದ್ದಿದೆ. ಘಟನೆಯಲ್ಲಿ ರಿಕ್ಷಾದ ಹಿಂಬದಿಯಲ್ಲಿ
ಕುಳಿತಿದ್ದ ಪೆರಾಬೆ ಗ್ರಾಮದ ಸಾಮೆತಡ್ಕ ನಿವಾಸಿ ನಯಾಝ್ ಎಂಬವರಿಗೆ ಗಾಯವಾಗಿದೆ. ಗಾಯಾಳು ಪುತ್ತೂರು
ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ
ಪಡೆಯುತ್ತಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.