






ಕಡಬ ಟೈಮ್ಸ್,(KADABA TIMES): ಸವಣೂರು: ಸವಣೂರು ಗ್ರಾಮದ ಪರಣೆ ಎಂಬಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸವಣೂರು
ಕಡೆಯಿಂದ ಬೆಳ್ಳಾರೆ ಕಡೆಗೆ ಬರುತ್ತಿದ್ದ ಲಾರಿಯನ್ನು ಬೆಳ್ಳಾರೆ ಪೊಲೀಸ್ ಠಾಣಾ ಎಸೈ ಈರಯ್ಯ ಡಿ ಎನ್ ಅವರು
ನಿಲ್ಲಿಸಿ ಪರಿಶೀಲಿಸಿದಾಗ ಮರಳನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದ ಮೇರೆಗೆ, ಪರಿಶೀಲನೆ ನಡೆಸಿದಾಗ ಯಾವುದೇ ಪರವಾನಿಗೆಯನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳದೇ ಇರುವುದು ಕಂಡು ಬಂದಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ಅ.ಕ್ರ: 31/2025 ಕಲಂ: 42.43.44.36 ಕರ್ನಾಟಕ ಮೈನರ್,ಮಿನರಲ್ ಕನ್ಸಿಸ್ಟೆಂಟ್ ರೂಲ್ 1994 ಮತ್ತು ಕಲಂ: 4(1), 4(1ಎ), 21(1)(1ಎ) ಎಮ್ , ಎಮ್ , ಆರ್, ಡಿ 1957 ಮತ್ತು ಕಲಂ: 303(2) BNS&2023ಯಂತೆ ಪ್ರಕರಣ ದಾಖಲಾಗಿದೆ.