ದಕ್ಷಿಣ ಕನ್ನಡ: OLX APP ಮೂಲಕ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಪ್ರಕರಣ: ಆರೋಪಿಯ ಬಂಧನ

ದಕ್ಷಿಣ ಕನ್ನಡ: OLX APP ಮೂಲಕ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಪ್ರಕರಣ: ಆರೋಪಿಯ ಬಂಧನ

Kadaba Times News

ಕಡಬ ಟೈಮ್ಸ್, ಮಂಗಳೂರು: ಒಎಲ್ಎಕ್ಸ್ ಆ್ಯಪ್‌ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.



ಬಂಧಿತ ವ್ಯಕ್ತಿ ಉತ್ತರ ಕ ನ್ನಡ ಜಿಲ್ಲೆಯ ಬನವಾಸಿಯ ರವಿಚಂದ್ರ ಮಂಜುನಾಥ ರೇವಣಕರ (29)ಎಂದು ಗುರುತಿಸಲಾಗಿದೆ. 


ಆರೋಪಿಯು ನಕಲಿ ಜಾಹೀರಾತುಗಳನ್ನು ಒಎಲ್ಎಕ್ಸ್‌ನಲ್ಲಿ ಹಾಕಿ,  ಖರೀದಿದಾರರಿಂದ ಮೊದಲು ಹಣ ಪಡೆದು ನಂತರ ಸಂಪರ್ಕ ಕಡಿದು ವಂಚನೆ ಮಾಡುತ್ತಿದ್ದನು. ಈತ ವಿವಿಧ ಬ್ಯಾಂಕ್ ಗಳಲ್ಲಿ 21 ಖಾತೆಗಳನ್ನು ಹೊಂದಿದ್ದು 8 ಸಿಮ್ ಕಾರ್ಡ್ ಬಳಕೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.ಅಲ್ಲದೆ 80 ಕ್ಕೂ ಅದೀಕ ವಂಚನೆ ದೂರುಗಳು ದಾಖಲಾಗಿರುವುದು ತಿಳಿದು ಬಂದಿದೆ.


ಪೊಲೀಸರ ತನಿಖೆಯಲ್ಲಿ ಈ ವಂಚನೆಯ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ರಿ ಕಾರ್ಯಾಚರಣೆಯಲ್ಲಿ  ಮಂಗಳೂರು ನಗರ ಸೆನ್  ಕ್ರೈಂ ಪೊಲೀಸ್ ಠಾಣಾ ಅಧಿಕಾರಿ  ಮತ್ತು  ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top