




ಕಡಬ ಟೈಮ್ಸ್ (KADABA TIMES): ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಸಮೀಪದ ಹಳೆನೇರೆಂಕಿ ಗ್ರಾಮದ ನೇರೆಂಕಿ ಎಂಬಲ್ಲಿ ತೋಟವೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಪೊಲೀಸರು ಜೂ.10ರಂದು ದಾಳಿ ನಡೆಸಿದ್ದಾರೆ.
![]() |
KADABA POLICE STATION (KADABA TIMES) |
ಘಟನಾ ಸ್ಥಳದಿಂದ ವಾಹನ, ಕೋಳಿ ಹಾಗೂ ನಗದು ವಶಪಡಿಸಿಕೊಂಡಿದಲ್ಲದೆ, ಅಕ್ರಮ
ಕೋಳಿ ಅಂಕದ ಪ್ರಮುಖ ರೂವಾರಿ ಸಹಿತ ವೇಳೆ ಮೂವರನ್ನು
ವಶಕ್ಕೆ ಪಡೆದು ಬಂಧಿಸಿದ್ದಾರೆ. ನೇರೆಂಕಿ
ನಿವಾಸಿ ಮೋಹನ್ ದಾಸ್ ರೈ (48 ವ), ಪೆರಾಬೆ ಗ್ರಾಮದ ಬೇಲ್ವಾಡಿ ನಿವಾಸಿ ರಾಧಕೃಷ್ಣ, (51 ವ) ಆಲಂಕಾರು ನಿವಾಸಿ ವೆಂಕಟೇಶ(30 ವ) ಬಂಧಿತರು.
ಇನ್ನು ಎಂಟು ಮಂದಿ ದಿಕ್ಕು ಪಾಲಾಗಿ ಓಡಿ ಪರಾರಿಯಾಗಿದ್ದಾರೆ.
ಸ್ಥಳದಲ್ಲಿದ್ದ 6 ಬೈಕ್, 2 ಕಾರು, 4 ಕೋಳಿ, ಕೋಳಿ
ಅಂಕಕ್ಕೆ ಬಳಸಲಾಗುವ ಕತ್ತಿ ಹಾಗೂ 3,560 ರೂ. ವಶಕ್ಕೆ ಪಡೆದುಕೊಂಡಿದ್ದಾರೆ. ಹಳೆನೇರಂಕಿ ಗ್ರಾಮದ
ನೇರಂಕಿ ಎಂಬಲ್ಲಿ ಅಕ್ರಮ ಕೋಳಿ ಅಂಕದ ರೂವಾರಿಯ ತೋಟವೊಂದರಲ್ಲಿ
ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಕಡಬ ಪೊಲೀಸ್
ಠಾಣಾ ಪೋಲಿಸ್ ಉಪನಿರೀಕ್ಷಕರಾದ ಅಭಿನಂದನ್ರವರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿರುವುದಾಗಿದೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ :44/2025 ಕಲಂ: 87, 93 KP Act ಹಾಗೂ 3,11 THE PREVENTION OF CRUELTY TO ANIMALS ACT, 1960 ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆಗಮನದ ಬಳಿಕ ಪೊಲೀಸರ ಅಪರೂಪದ ದಾಳಿಗೆ ಅಕ್ರಮ ಕೋಳಿ ಅಂಕ ಆಯೋಜಕರು ಬೆಚ್ಚಿಬಿದ್ದಿದ್ದಾರೆ . ಅಲ್ಲದೆ ಈ ಬಗ್ಗೆ ಚರ್ಚೆಯನ್ನೂ ಮಾಡುತ್ತಿದ್ದಾರೆ.