ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಿಳಿನೆಲೆಯ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಮೃತ್ಯು

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಿಳಿನೆಲೆಯ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಮೃತ್ಯು

Kadaba Times News
0

ಕಡಬ ಟೈಮ್ಸ್, ಬಿಳಿನೆಲೆ: ಅನಾರೋಗ್ಯದಿಂದ ಬಳಲುತ್ತಿದ್ದ ಬಿಳಿನೆಲೆ ಗ್ರಾಮದ ಆಟೋ ಚಾಲಕರೊಬ್ಬರು ಚಿಕಿತ್ಸೆ ಫಲಿಸದೆ ಜೂನ್ 17 ರಂದು ಆಸ್ಪತ್ರೆಯಲ್ಲಿ ನಿಧನ ಹೊಂದಿದ ಘಟನೆ ನಡೆದಿದೆ. 


ಮೃತ ವ್ಯಕ್ತಿಯನ್ನು ಬಿಳಿನೆಲೆ ಗ್ರಾಮದ ಚೆಂಡೆಹಿತ್ಲು ನಿವಾಸಿ ದಿ. ಮೇದಪ್ಪ ಗೌಡರ ಪುತ್ರ ಚೇತನ್ ಕುಮಾರ್ ( 37ವ) ಎಂದು ಗುರುತಿಸಲಾಗಿದೆ. 



 ಕಳೆದ ಕೆಲವು ತಿಂಗಳುಗಳಿಂದ ತೀವ್ರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದರು.  ಆರಂಭದಲ್ಲಿ ಕಡಬದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಆರೋಗ್ಯ ಮತ್ತಷ್ಟು ಉಲ್ಬಣಗೊಂಡ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.


 ವೈದ್ಯಕೀಯ ತಪಾಸಣೆಯಲ್ಲಿ ಅವರಿಗೆ ಜಾಂಡೀಸ್ ಕಾಯಿಲೆ ಧೃಢಪಟ್ಟಿತ್ತು ಎನ್ನಲಾಗಿದೆ.ಚೇತನ್ ಕುಮಾರ್ ಅವರು ಹಲವು ವರ್ಷಗಳಿಂದ ಬಿಳಿನೆಲೆ ಪ್ರದೇಶದಲ್ಲಿ ಆಟೋ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಷ್ಟೇ ಅಲ್ಲದೇ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. 


ಇವರ ನಿಧನಕ್ಕೆ ಕದಂಬ ಆಟೋ ಚಾಲಕರ ಮತ್ತು ಮಾಲಕರ ಸಂಘದಿಂದ ಸಂತಾಪ ಸೂಚಿಸಿದೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top