ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿ: ನಿರಂತರ ಗಾಳಿ ಮಳೆಗೆ ಬಲ್ಯದಲ್ಲಿ ಮುಖ್ಯ ರಸ್ತೆಗೆ ಬಿದ್ದ ಮರ ,ವಾಹನ ಸಂಚಾರಕ್ಕೆ ತಡೆ

ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿ: ನಿರಂತರ ಗಾಳಿ ಮಳೆಗೆ ಬಲ್ಯದಲ್ಲಿ ಮುಖ್ಯ ರಸ್ತೆಗೆ ಬಿದ್ದ ಮರ ,ವಾಹನ ಸಂಚಾರಕ್ಕೆ ತಡೆ

Kadaba Times News

ಕಡಬ ಟೈಮ್ಸ್, (KADABA TIMES)ಕಡಬ :ಕರಾವಳಿ ಪ್ರದೇಶ ಸೇರಿದಂತೆ . ಜೆಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ.ಕಳೆದೆರಡು ದಿನಗಳಿಂದ ಕಡಬ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ.


ಜೂ 25 ರಂದು ಸುರಿದ ಗಾಳಿ ಮಳೆಗೆ ಬಲ್ಯ ಗ್ರಾ.ಪಂ ವ್ಯಾಪ್ತಿಯ     ಕಡಬ- ನೆಲ್ಯಾಡಿ  ಮುಖ್ಯ  ರಸ್ತೆಯ ಬಲ್ಯ ಬಳಿ  ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ಇದರ ಪರಿಣಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ..



ಮುಂಜಾನೆ ವೇಳೆ ಕಾರ್ಮಿಕರು, ವಿದ್ಯಾರ್ಥಿಗಳು ವಾಹನವಿಲ್ಲದೆ ಪರದಾಡಿದ ಪ್ರಸಂಗ ಎದುರಾಯಿತು.  ಈ ಮಾರ್ಗದಲ್ಲಿ ಸಂಚರಿಸುವ ಬೀದಿಗುಡ್ಡೆ –ನೆಲ್ಯಾಡಿ-  ಧರ್ಮಸ್ಥಳ ಕೆ ಎಸ್ ಆರ್ ಟಿಸಿ ಬಸ್  ನಿಗದಿತ ಸಮಯಕ್ಕಿಂತ  ಸುಮಾರು ಒಂದು ಗಂಟೆ ತಡವಾಗಿ ಸಂಚರಿಸಿದೆ.


ರಸ್ತೆಗೆ   ಮರ ಬಿದ್ದಿರುವ ವಿಚಾರ ತಿಳಿಯುತ್ತಿದ್ದಂತೆ   ಸ್ಥಳೀಯರು  ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.  ವಿದ್ಯುತ್ ತಂತಿಗಳಿಗೆ ಮರದ ಗೆಲ್ಲು ತಾಗಿರುವುದರಿಂದ  ಈ ಭಾಗದಲ್ಲಿ ವಿದ್ಯುತ್ ನಲ್ಲಿ ವ್ಯತ್ಯಯ ಉಂಟಾಗಿದೆ.    ರಸ್ತೆಯುದ್ದಕ್ಕೂ ಮೀಸಲು ಅರಣ್ಯ ಪ್ರದೇಶವೂ ಇರುವುದರಿಂದ ರಸ್ತೆ ಬದಿಯ ಅಲ್ಲಲ್ಲಿ ಕೆಲ ಅಪಾಯಕಾರಿ ರೀತಿಯಲ್ಲಿ ಮರಗಳಿವೆ . ಇವುಗಳನ್ನು ನಿಯಮಾನುಸಾರ ಕನಿಷ್ಠ ಕೊ


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top