Atrocity case-ಜಾತಿ ನಿಂದನೆ ಆರೋಪ ಎದುರಿಸುತ್ತಿದ್ದ ನೆಲ್ಯಾಡಿಯ ತಂದೆ –ಮಗ ದೋಷಮುಕ್ತ

Atrocity case-ಜಾತಿ ನಿಂದನೆ ಆರೋಪ ಎದುರಿಸುತ್ತಿದ್ದ ನೆಲ್ಯಾಡಿಯ ತಂದೆ –ಮಗ ದೋಷಮುಕ್ತ

Kadaba Times News

 ಕಡಬ ಟೈಮ್ಸ್, (KADABA TIMES)ನೆಲ್ಯಾಡಿ:   ಜಾತಿ ನಿಂದನೆ ಆರೋಪ ಎದುರಿಸುತ್ತಿದ್ದ ನೆಲ್ಯಾಡಿ ತಂದೆ –ಮಗನನ್ನು ದೋಷಮುಕ್ತಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.



ನೆಲ್ಯಾಡಿ ಗ್ರಾಮದ ಮೇಲ್ಮಕ್ಕಿ ನಿವಾಸಿ ಅಣ್ಣು ಎಂಬವರು 2017ರ ಫೆಬ್ರವರಿ22 ರಂದು   ರಾತ್ರಿ ಮನೆಯಲ್ಲಿದ್ದ ಸಮಯ  ನೆರೆ ಮನೆಯ ಗಣಪಯ್ಯ ಗೌಡ ಮತ್ತು ಅವರ ಮಗ ಸೋಮಶೇಖರ ಗೌಡರವರು ಏಕಾಏಕಿಯಾಗಿ ಅ ಣ್ಣು ಅವರ ಮನೆಯ ಅಂಗಳಕ್ಕೆ ಬಂದು  ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕೈ  ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿತ್ತು.


ಗಾಯಗೊಂಡಿದ್ದ ಅಣ್ಣು ಅವರು ಪುತ್ತೂರು ಸರಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.  ಹಳೆದ್ವೇಷದಿಂದ ಈ ಕೃತ್ಯ ಎಸಗಲಾಗಿತ್ತು ಎಂದು ಆರೋಪಿಸಿ  ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ಇದರ ವಿಚಾರಣೆ ನಡೆಸಿದ ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶಿಸಿದೆ. ಆರೋಪಿಗಳ ಪರ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top