ನೆಲ್ಯಾಡಿ: ಮರದ ದೊಣ್ಣೆಯಿಂದ ಹೊಡೆದು ಯುವಕನ ಹತ್ಯೆ: ಜಗಳಕ್ಕೆ ಕಾರಣವಾಗಿದ್ದು ಈ ಎರಡು ವಿಷಯ

ನೆಲ್ಯಾಡಿ: ಮರದ ದೊಣ್ಣೆಯಿಂದ ಹೊಡೆದು ಯುವಕನ ಹತ್ಯೆ: ಜಗಳಕ್ಕೆ ಕಾರಣವಾಗಿದ್ದು ಈ ಎರಡು ವಿಷಯ

Kadaba Times News
0

KADABA TIMES,(ಕಡಬ ಟೈಮ್ಸ್)  ನೆಲ್ಯಾಡಿ:  ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಚಿಕ್ಕಪ್ಪನ ಮಗನೇ ತನ್ನ ಸೋದರ ಸಂಬಂಧಿಯನ್ನು ಮರದ ದೊಣ್ಣೆಯಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ಮೇ 9 ರಂದು ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದಲ್ಲಿ  ನಡೆದಿದೆ


ನೆಲ್ಯಾಡಿ ಗ್ರಾಮದ ನಿವಾಸಿ ಶರತ್ ಕುಮಾರ್ (34) ಕೊಲೆಯಾದ ದುರ್ದೈವಿ. ಈತನ ಚಿಕ್ಕಪ್ಪ ಜನಾರ್ಧನ ಗೌಡರ ಮಗ ಹರಿಪ್ರಸಾದ್ ಕೊಲೆ ಆರೋಪಿ.



ಶರತ್ಹಿರಿಯ ಸಹೋದರ ಚರಣ್ ಕುಮಾರ್ (37) ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತೆ 2023 ಕಲಂ 103(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆಮೃತ ಶರತ್ ಕುಮಾರ್ ಹಾಗೂ ಅವರ ಚಿಕ್ಕಪ್ಪ ಜನಾರ್ಧನ ಗೌಡರ ಮಕ್ಕಳ ನಡುವೆ ಜಾಗ ಹಾಗೂ  ಕಟ್ಟಿಗೆಯ ವಿಚಾರವಾಗಿ  ಕೆಲವು ದಿನಗಳಿಂದ  ಆಗಾಗ  ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆಮೇ 8 ರಂದು ಕೂಡ ಇವರ ನಡುವೆ ಇದೇ ವಿಚಾರವಾಗಿ ಜಗಳವಾಗಿತ್ತು.


ವೈಷಮ್ಯದ ಹಿನ್ನೆಲೆಯಲ್ಲಿ, ಮೇ9 ರಂದು ರಾತ್ರಿ 8 ಗಂಟೆ ಸುಮಾರಿಗೆ  ಶರತ್ ಕುಮಾರ್, ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ  ಹೋಗಿ  ಮನೆಯ ಅಂಗಳದಲ್ಲಿ ನಿಂತು ಚಿಕ್ಕಪ್ಪನ ಮತ್ತೊಬ್ಬ ಮಗನಾದ ಸತೀಶನಿಗೆ ಬೈಯುತ್ತಿದ್ದರು.

 

ಸಂದರ್ಭದಲ್ಲಿ ತೋಟದಿಂದ ಬಂದ ಆರೋಪಿ ಹರಿಪ್ರಸಾದ್, ತನ್ನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಶರತ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಮೊದಲ ಏಟಿಗೆ ಶರತ್ ಕುಮಾರ್ ಅಂಗಳದಲ್ಲಿ ಕುಸಿದು ಬಿದ್ದಿದ್ದು, ವೇಳೆ ಆರೋಪಿ ಹರಿಪ್ರಸಾದ್ ಮತ್ತೊಮ್ಮೆ ಆತನ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಎಸ್ಪಿ ಭೇಟಿ, ಪರಿಶೀಲನೆ:  ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲು ಹಾಗೂ ಆರೋಪಿಯ ಶೀಘ್ರ ಬಂಧನಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಪೊಲೀಸರು ಆರೋಪಿ ಹರಿಪ್ರಸಾದ್ ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top