


ಮರಣೋತ್ತರ ಪರೀಕ್ಷೆಗೆ ಶವ ಆಸ್ಪತ್ರೆಗೆ ರವಾನೆ
KADABA TIMES(ಕಡಬ ಟೈಮ್ಸ್): ನೆಲ್ಯಾಡಿ: ಯುವಕನೊಬ್ಬ ಅನುಮಾನಸ್ಪವಾಗಿ ಮೃತಪಟ್ಟ ಘಟನೆ ಮೇ.9ರ ಶುಕ್ರವಾರ ತಡರಾತ್ರಿ ನೆಲ್ಯಾಡಿಯ ಮಾದರಿ ಎಂಬಲ್ಲಿ ನಡೆದಿತ್ತು.
ಮಾದೇರಿ ನಿವಾಸಿ ಗಂಗಪ್ಪ ಗೌಡ ಎಂಬವರ ಪುತ್ರ, ಕೂಲಿ ಕೆಲಸ ಮಾಡಿಕೊಂಡಿದ್ದ ಶರತ್ (34) ಮೃತಪಟ್ಟ ಯುವಕ. ಈತ ಶುಕ್ರವಾರ ರಾತ್ರಿ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದನು. ಅಲ್ಲಿ ಮನೆಮಂದಿಯೊಂದಿಗೆ ಜಗಳವಾಗಿದೆ ಎನ್ನಲಾಗಿದೆ.
![]() |
ಯುವಕ ಶರತ್(KADABA TIMES) |
ನಂತರ ಮನೆಯ ಅಂಗಳದಲ್ಲಿ ಶರತ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ತಲೆಯಲ್ಲಿ ಗಾಯದ ಗುರುತುಗಳಾಗಿದೆ ಎಂದು ತಿಳಿದು ಬಂದಿದೆ. ಕೌಟುಂಬಿಕ ಕಲಹ ಘಟನೆಗೆ ಕಾರಣ ಎನ್ನಲಾಗಿದ್ದು, ಪೊಲೀಸರ ತನಿಖೆನಿಂದ ನಿಜಾಂಶ ಬಯಲಾಗಬೇಕಿದೆ.
ಹೆಚ್ಚಿನ ತನಿಖೆಗಾಗಿ ಶವವನ್ನು ದೇರಳಕಟ್ಟೆ ಆಸ್ಟತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಪ್ರಕರಣದ ಕುರಿತು ನಿಖರ ಮಾಹಿತಿ ತಿಳಿದು ಬರಬೇಕಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.