


ಕಡಬ ಟೈಮ್ಸ್ ,ನೆಲ್ಯಾಡಿ: ಇಲ್ಲಿನ ನೆಲ್ಯಾಡಿ ಸಮೀಪದ ಮಾದೇರಿ ಗ್ರಾಮದಲ್ಲಿ ಮೇ.9 ರ ( ಶುಕ್ರವಾರ ) ತಡರಾತ್ರಿ ಯುವಕನೊಬ್ಬನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಸ್ಥಳೀಯ ನಿವಾಸಿ ಶರತ್(35) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಮೃತ ಯುವಕನ ಚಿಕ್ಕಪ್ಪನ ಮನೆಯ ಅಂಗಳದಲ್ಲೇ ನಡೆದಿದೆ ಎಂದು ತಿಳಿದುಬಂದಿದೆ.
ಮೃತ ದೇಹದ
ಬಳಿ ಬಳಿ ಚಾಕು
ಬಿದ್ದಿರುವುದು ಪತ್ತೆಯಾಗಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಉಪ್ಪಿನಂಗಡಿ ಪೊಲೀಸ್ ಠಾಣೆಯ
ಅಧಿಕಾರಿಗಳು ಹಾಗೂ ನೆಲ್ಯಾಡಿ ಹೊರಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಹತ್ಯೆಗೆ ಕಾರಣ ಹಾಗೂ ಆರೋಪಿಗಳ ಬಗ್ಗೆ ಇನ್ನಷ್ಟು ಮಾಹಿತಿ ನಿರೀಕ್ಷೆಯಲ್ಲಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.