


ಇಂದು “ಅಪ್ಪೆ ಭಗವತಿ” ನಾಟಕ ಪ್ರದರ್ಶನ
ಕಡಬ ಟೈಮ್ಸ್ (KADABA TIMES):ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತೀ ಮಹೋತ್ಸವ ಮೇ.8 ರಿಂದ ಮೇ.13 ರ ವರೆಗೆ ನಡೆಯಲಿದೆ.
ಮೇ.8 ರ ಮುಂಜಾನೆ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ ದೀಪ ಬೆಳಗಿಸಿ ನಾಮ ಸಂಕೀರ್ತನ – ದೇವರ ನಾಮಗಳ ಗಾಯನ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಯಜ್ಞೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
ಮೇ. 9 ರ ಸಂಜೆ ಶ್ರೀ ವೇದವ್ಯಾಸ ಜಯಂತೀ, ವಸಂತ ಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಸಂಜೆ ಗಂಟೆ 7.00 ನಾಟಕ ಬಿತ್ತ್ ಲ್ದ ಉಳ್ಳಾಲ್ತಿ “ಅಪ್ಪೆ ಭಗವತಿ” ನಡೆಯಲಿದೆ.