


ಸ್ವಗ್ರಾಮದಲ್ಲಿ ಕೊರತ್ತಿ ದೈವದೊಂದಿಗೆ ವಾಗ್ವಾದ ನಡೆಸಿ ಭಾರೀ ಸುದ್ದಿಯಲ್ಲಿದ್ದರು.
ಪುತ್ತೂರಿನ ಉದ್ಯಮಿ, ಕೃಷಿಕ, ರಾಜಕೀಯ ಕಾರ್ಯಕರ್ತ ರಾಜಾರಾಮ ಭಟ್ ಎಡಕ್ಕಾನ ಅವರು ವಿದೇಶದಲ್ಲಿ ಹೃದಯಾಘಾತದಿಂದ ಸಾ*ವನ್ನಪ್ಪಿದ್ದಾರೆ.
ಸುಳ್ಯ ತಾಲೂಕಿನ ಕಲ್ಮಡ್ಕದ ನಿವಾಸಿಯಾದ ಎಡಕ್ಕಾನ ರಾಜರಾಮ್ ಭಟ್ ಅವರು ಮಸ್ಕತ್‌ನಲ್ಲಿ ಭಾರತೀಯ ಕಾಲಮಾನ ಮುಂಜಾನೆ 3 ಗಂಟೆಗೆ ಹೃದಯಾಘಾತದಿಂದ ನಿಧ*ನರಾದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಇವರು, ಕಳೆದ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಅವರು ಪಕ್ಷೇತರರಾಗಿ ಸ್ಪರ್ಧಿಸಿದಾಗ ಅವರ ಜೊತೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಚುನಾವಣೆಯ ಬಳಿಕವೂ ಅರುಣ್ ಪುತ್ತಿಲ ಅವರು ‘ಪುತ್ತಿಲ ಪರಿವಾರ’ ಎಂಬ ಸಾಮಾಜಿಕ ರಾಜಕೀಯ ಸಂಘಟನೆಯನ್ನು ಸ್ಥಾಪಿಸಿದಾಗ, ಅದರ ಜೊತೆಯೂ ಗುರುತಿಸಿಕೊಂಡಿದ್ದರು.
ಆ ಬಳಿಕ ಅವರು ‘ಭಾರತೀಯ ಜನಹಿತ ಪರಿವಾರ’ ಎಂಬ ಸಂಘಟನೆಯನ್ನು ರೂಪಿಸಲು ಯತ್ನಿಸಿದರಾದರೂ, ಅದರಲ್ಲಿ ಅವರಿಗೆ ಯಶಸ್ಸು ದಕ್ಕಿರಲಿಲ್ಲ. ಮೂರು ತಿಂಗಳ ಹಿಂದೆ ತಮ್ಮ ಸ್ವಗ್ರಾಮದಲ್ಲಿ ಕೊರತ್ತಿ ದೈವದೊಂದಿಗೆ ವಾಗ್ವಾದ ನಡೆಸುತ್ತಿದ್ದ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
3 ದಿನಗಳ ಹಿಂದೆ ನಡೆದ ಸುಹಾಸ್ ಶೆಟ್ಟಿ ಅವರ ಸಾವಿನಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದ ರಾಜಾರಾಮ್ ಭಟ್ ಅವರು, ಈ ಕುರಿತು ವಿಡಿಯೋವೊಂದನ್ನು ಹರಿಬಿಟ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸುಹಾಸ್ ಶೆಟ್ಟಿಯವರ ಫೋಟೋವನ್ನೇ ತಮ್ಮ ಡಿಪಿಯನ್ನಾಗಿಸಿಕೊಂಡಿದ್ದರು.