


ಕಡಬ: ಹೂಡಿಕೆ ಜ್ಞಾನವನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸುವ ಹೆಜ್ಜೆಯಾಗಿ ಭಾರತದ ಶ್ರೇಷ್ಠ Stock Broker ಸಂಸ್ಥೆಗಳಲ್ಲಿ ಒಂದಾಗಿರುವ ಏಂಜಲ್ ಒನ್ ತನ್ನ ಹೊಸ ಫ್ರಾಂಚೈಸಿ ಶಾಖೆಯನ್ನು ಕಡಬದ ಸಂತೆಕಟ್ಟೆ ಬಳಿ ಉದ್ಘಾಟನೆಗೊಂಡಿದೆ.
ಕೇಶವ ಭಟ್ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಬಾಲಸುಬ್ರಹ್ಮಣ್ಯ ಭಟ್, ಕಾರ್ತಿಕ್ ಚಿತ್ರದುರ್ಗ ಸೇರಿದಂತೆ ಹಲವಾರು ಗಣ್ಯರು ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಶಾಖೆಯು ಜೀವನ್ ಎಚ್.ಕೆ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ್ದು, ಇವರು ಹೂಡಿಕೆ ಕ್ಷೇತ್ರದಲ್ಲಿ 6 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿದ್ದಾರೆ. ಹೂಡಿಕೆದಾರರಿಗೆ ಆಧುನಿಕ ಮತ್ತು ಸಮಗ್ರ ಆರ್ಥಿಕ ಸೇವೆಗಳನ್ನು ಒದಗಿಸುವ ಗುರಿ ಈ ಸಂಸ್ಥೆಯದ್ದಾಗಿದೆ.
ಲಭ್ಯವಿರುವ ಪ್ರಮುಖ ಸೇವೆಗಳು:
1. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮತ್ತು ನಿರ್ವಹಣೆ
2. ಮ್ಯೂಚುವಲ್ ಫಂಡ್ ಹೂಡಿಕೆ ಸಲಹೆ ಮತ್ತು ನಿರ್ವಹಣೆ
3. ವಿಮೆ ಸೇವೆಗಳು – ಲೈಫ್ ಮತ್ತು ಜನರಲ್ ಇನ್ಶೂರೆನ್ಸ್
4. ಅಲ್ಗಾರಿಥಾಮಿಕ್ ಟ್ರೇಡಿಂಗ್ ಮತ್ತು ಮಾರ್ಜಿನ್ ಟ್ರೇಡಿಂಗ್
5. ಬ್ಯಾಸ್ಕೆಟ್ ಆರ್ಡರ್‌ಗಳು, GTT ಆರ್ಡರ್‌ಗಳು, ಸುಧಾರಿತ ಚಾರ್ಟ್‌ಗಳು
Smart API ಹಾಗೂ ಇ ಬಂಡವಾಳ
6. ಮಾರುಕಟ್ಟೆಗಳ ನ್ಯಾವಿಗೇಶನ್ ಟೂಲ್ಸ್
ಏಂಜಲ್ ಒನ್ ಆಪ್ ಬಳಸಿ ಗ್ರಾಹಕರು ಈ ಎಲ್ಲ ಸೇವೆಗಳನ್ನು ಒಂದು ಕ್ಲಿಕ್‌ನಲ್ಲೇ ಸೌಲಭ್ಯವಾಗಿಸಿಕೊಂಡು, ತಾವು ಎಲ್ಲಿ ಇದ್ದರೂ ಹೂಡಿಕೆಯನ್ನು ಸುಲಭವಾಗಿ ನಿರ್ವಹಿಸಬಹುದು. ಈ ಹೊಸ ಶಾಖೆಯು ಕಡಬ ಹಾಗೂ ಸುತ್ತಲಿನ ಹೂಡಿಕೆದಾರರಿಗೆ ಹೂಡಿಕೆ ತಂತ್ರಜ್ಞಾನವನ್ನು ತಲುಪಿಸಿ, ಆರ್ಥಿಕ ಭದ್ರತೆ ಮತ್ತು ಬೆಳವಣಿಗೆಗೆ ಸಹಕಾರಿಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಅಥವಾ ಸೇವೆಗಳನ್ನು ಪಡೆಯಲು ಸಂಪರ್ಕಿಸಿ: ಜೀವನ್ ಎಚ್.ಕೆ ಮೊಬೈಲ್: 8197238826