


ಕಡಬ ಟೈಮ್ಸ್ (KADABA TIMES): ರಬ್ಬರ್ ಹಾಲು ಸಂಗ್ರಹಿಸಲು ಮನೆಯಿಂದ ಹೊರಟಿದ್ದ ಅರ್ತಿಯಡ್ಕದ ಮಹಿಳೆಯ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ ಕಾರಣ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ಪುತ್ತೂರಿನ ಕೊಳ್ತಿಗೆ ಗ್ರಾಮದಿಂದ ವರದಿಯಾಗಿದೆ.
ಕಾಡಾನೆ ದಾಳಿಗೆ ಬಲಿಯಾದ ಮಹಿಳೆ(KADABA TIMES)
ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಗಡಿ ಭಾಗವಾದ ಕನ್ಯಾರು
ಮಲೆ ಎಂಬಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಇಂದು ಮಹಿಳೆಯು ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಆನೆಯ ರೌದ್ರಾವತಾರದ ಎದುರು ನಲುಗಿದ ಆ ಮಹಿಳೆ, ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಅನಿರೀಕ್ಷಿತ ಘಟನೆಯು ಇಡೀ ಕಾಲನಿ ಮತ್ತು ಸುತ್ತಮುತ್ತಲಿನ
ಪ್ರದೇಶಗಳಲ್ಲಿ ತೀವ್ರ ಆಘಾತ ಮತ್ತು ದುಃಖವನ್ನು ಉಂಟುಮಾಡಿದೆ. ಕಾಡಾನೆಗಳ ಹಾವಳಿಯಿಂದ ನಿರಂತರವಾಗಿ ಆತಂಕದಲ್ಲಿಯೇ ಬದುಕುತ್ತಿರುವ ಇಲ್ಲಿನ ಜನರ ಭಯವನ್ನು ಈ ಘಟನೆ ಮತ್ತಷ್ಟು ಹೆಚ್ಚಿಸಿದೆ.
ಕಳೆದೊಂದು ವಾರದಿಂದ ಈ ಪರಿಸರದಲ್ಲಿ ಕಾಡಾನೆ ಹಾವಳಿ ಇಟ್ಟಿತ್ತು
. ಈ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ದುರ್ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಇಷ್ಟು ಮಾಹಿತಿ ಲಭ್ಯವಾಗಿದ್ದು, ಮೃತ ಮಹಿಳೆಯ ವಿವರಗಳು ಮತ್ತು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.