


KADABA TIMES(ಕಡಬ ಟೈಮ್ಸ್) ಕಡಬ: ಚಲಿಸುತ್ತಿದ್ದ ಕಾರಿನಲ್ಲಿ ಡೋರ್ ಮತ್ತು ಕಾರಿನ ಮೇಲೆ ಕುಳಿತು ಪುಂಡಾಟ ಮಾಡುತ್ತಾ ಇತರ ವಾಹನ ಗಳಿಗೆ ತೊಂದರೆ ಉಂಟು ಮಾಡಿ ಹುಚ್ಚಾಟ ಮೆರೆದ ಘಟನೆ ಏ 27ರ ರಾತ್ರಿ ಕಡಬದಲ್ಲಿ ನಡೆದಿದೆ.
ಕಡಬ-ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಸುಮಾರು ಕಡಬದಿಂದ
ಆಲಂಕಾರು ವರೆಗೆ 15ಕಿ.ಮೀ ಉದ್ದಕ್ಕೂ ಹಲವು
ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಕರ್ಕಶವಾಗಿ ನಿರಂತರ ಹಾರ್ನ್ ಹಾಕುತ್ತಾ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿರುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.ಕಾರಿನ ಮೇಲೆ ಕುಳಿತು ಪುಂಡಾಟ(KADABA TIMES)
ಇದಕ್ಕೆ ಪೂರಕ ಎಂಬಂತೆ ಎರಡು ವೀಡಿಯೋ ತುಣುಕುಗಳು ಲಭ್ಯವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ಹಲವು
ಕಾರಿನಲ್ಲಿ ಅಪಾಯಕಾರಿ
ರೀತಿಯಲ್ಲಿ ಕುಳಿತು ಹೋಗುತ್ತಿರುವುದು ಕಂಡು ಬಂದಿದೆ. ಈ
ಘಟನೆ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
ಇದೇ ರೀತಿ ಸುಳ್ಯದಲ್ಲಿ ಇತ್ತೀಚೆಗೆ ಕಾರಿನ ಡೋರ್ ಮತ್ತು ಕಾರಿನ ಮೇಲೆ ಕುಳಿತು ಪುಂಡಾಟ ಮೆರೆದವರ ವಿರುದ್ದ ಸುಳ್ಯ ಪೊಲೀಸರು ಸುಮೊಟೊ ಕೇಸು ದಾಖಲಿಸಿಕೊಂಡಿದ್ದರು.ಈ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.ಪೊಲೀಸರು ಈ ವೀಡಿಯೋ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಲು ಮುಂದಾಗಿರುವುದಾಗಿ ತಿಳಿದು ಬಂದಿದೆ.