Kadaba :ಚಲಿಸುತ್ತಿದ್ದ ಕಾರಿನ ಬಾಗಿಲು, ಮೇಲ್ಭಾಗದಲ್ಲಿ ಕುಳಿತು ಯುವಕರ ಹುಚ್ಚಾಟ:ವರದಿ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡ ಕಡಬ ಪೊಲೀಸರು

Kadaba Times News

ಕಡಬ ಟೈಮ್ಸ್,(KADABA TIMES): ಕಡಬ:  ಚಲಿಸುತ್ತಿದ್ದ  ಕಾರಿನ  ಮೇಲೆ ಕುಳಿತು ಪುಂಡಾಟ ಮಾಡುತ್ತಾ ಇತರ ವಾಹನ ಗಳಿಗೆ ತೊಂದರೆ ಉಂಟು ಮಾಡಿ ಹುಚ್ಚಾಟ ಮೆರೆದವರ ವಿರುದ್ದ ಕಡಬ ಪೊಲೀಸರು ಸ್ವಯಂ ಪ್ರೇರಿತ  ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಡಬ-ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಸುಮಾರು  ಕಡಬದ ಪೆರಾಬೆಯಿಂದ ಆಲಂಕಾರು ವರೆಗೆ    ಹಲವು ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಕರ್ಕಶವಾಗಿ ನಿರಂತರ ಹಾರ್ನ್ ಹಾಕುತ್ತಾ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿರುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿತ್ತು. ಇದಕ್ಕೆ ಪೂರಕ ಎಂಬಂತೆ ಎರಡು ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿತ್ತು.

ಅಪಾಯಕಾರಿಯಾಗಿ ಕಾರಿನಲ್ಲಿ ಸಂಚರಿಸುತ್ತಿರುವುದು (KADABA TIMES)


ಪೊಲೀಸರು ದಾಖಲಿಸಿಕೊಂಡಿರುವ ದೂರಿನಲ್ಲಿ ಏನಿದೆ?:  ಕಡಬ ತಾಲೂಕು ಪೆರಾಬೆ ಗ್ರಾಮದ ಪರಿಸರದಲ್ಲಿನ ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪೆರಾಬೆ ಕಡೆಯಿಂದ ಆಲಂಕಾರು ಕಡೆಗೆ  ದಿನಾಂಕ: 27-04-2025 ರಂದು ರಾತ್ರಿ  ಸಮಯ  ಸುಮಾರು 07-30 ಗಂಟೆಗೆ 3 ಕಾರ್‌ಗಳ ಚಾಲಕರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯಲ್ಲಿ ತನ್ನ ಕಾರನ್ನು ಚಾಲನೆ ಮಾಡುತ್ತಾ 3 ಕಾರ್‌ಗಳ ಪೈಕಿ 2 ಕಾರ್‌ಗಳಲ್ಲಿ ಸಹ ಪ್ರಯಾಣಿಕರು ಕಿಟಕಿಯಿಂದ ಹೊರ ಬಂದು ಬೊಬ್ಬೆ ಹಾಕುತ್ತಿದ್ದು, ಹಾಗೂ ಒಂದು ಕಾರ್‌ನ ಸನ್ ರೂಫ್ ತರೆದು ಅದರ ಒಳಗಿನಿಂದ ಒಬ್ಬ ವ್ಯಕ್ತಿಯು ಬಾವುಟ ಹಿಡಿದುಕೊಂಡು ಜೋರಾಗಿ ಬೊಬ್ಬೆ ಹಾಕುತ್ತ ಹೋಗುತ್ತಿರುವ ಬಗ್ಗೆ ವಿಡಿಯೋ ಲಭ್ಯವಾಗಿತ್ತು.


ವಿಡಿಯೋವನ್ನು  ಪರಿಶೀಲನೆ ಮಾಡಿದಾಗ KA 19 ME 4400 ನೇ ಕಾರಿನ ಚಾಲಕನು ಅಜಾಗರೂಕತೆ ಹಾಗೂ  ನಿರ್ಲಕ್ಷತನದಿಂದ ರಸ್ತೆಯಲ್ಲಿ ತನ್ನ ಕಾರನ್ನು ಚಾಲನೆ ಮಾಡುತ್ತಾ ಕಾರಿನ ಸನ್ ರೂಫ್ ತರೆದು ಅದರ ಒಳಗಿನಿಂದ ಒಬ್ಬ ವ್ಯಕ್ತಿಯು ಬಾವುಟ ಹಿಡಿದುಕೊಂಡು ಜೋರಾಗಿ ಬೊಬ್ಬೆ ಹಾಕುತಿದ್ದು, ಹಾಗೂ KA 34 N 5909 ನೇ ನಂಬ್ರದ ಕಾರಿನ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯಲ್ಲಿ ತನ್ನ ಕಾರನ್ನು ಚಾಲನೆ ಮಾಡುತ್ತಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ 3 ಜನ ಸಹ ಪ್ರಯಾಣಿಕರು ಕಾರಿನ ಒಳಗಿನಿಂದ ಕಾರಿನ ಕಿಟಕಿಗಳ ಮುಖಾಂತರ ಹೊರ ಬಾಗಕ್ಕೆ ನಿಂತು ಬೊಬ್ಬೆ ಹಾಕಿಕೊಂಡು ಪ್ರಯಾಣಿಸುತ್ತಿರುವ ಹಾಗೂ ಇನ್ನೊಂದು ಕಪ್ಪು ಬಣ್ಣದ ಕಾರ್‌ನಲ್ಲಿ 2 ಜನ ಸಹ ಪ್ರಯಾಣಿಕರನ್ನು ಕಾರಿನ ಕಿಟಕಿಗಳ ಮುಖಾಂತರ ಹೊರ ಭಾಗಕ್ಕೆ ನಿಲ್ಲಿಸಿಕೊಂಡು ಪೆರಾಬೆ ಕಡೆಯಿಂದ ಆಲಂಕಾರು ಕಡೆಗೆ ಅಪಾಯಕಾರಿಯಾಗಿ ಚಾಲನೆ ಮಾಡಿಕೊಂಡು ಬಂದಿರುವುದು ಕಂಡು ಬಂದಿದೆ ಎಂದು ವಿವರಿಸಿದ್ದಾರೆ.


ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 30/2025 ಕಲಂ: 281, BNS-2023 184 IMV Actಯಂತೆ ಪ್ರಕರಣ ದಾಖಲಾಗಿರುತ್ತದೆ. ಇದೇ ರೀತಿ ಸುಳ್ಯದಲ್ಲಿ ಇತ್ತೀಚೆಗೆ ಕಾರಿನ ಡೋರ್ ಮತ್ತು ಕಾರಿನ ಮೇಲೆ ಕುಳಿತು ಪುಂಡಾಟ ಮೆರೆದವರ ವಿರುದ್ದ ಸುಳ್ಯ ಪೊಲೀಸರು ಸುಮೊಟೊ ಕೇಸು ದಾಖಲಿಸಿಕೊಂಡಿದ್ದರು. ಕೇಳಿ ಬಂದಿದೆ.



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top