ಸುಳ್ಯದಲ್ಲಿ ನಡೆದ ಘಟನೆ: ಪತಿಯ ಉತ್ತರಕ್ರಿಯೆ ದಿನದಂದೇ ಅಸ್ವಸ್ಥಗೊಂಡು ಇಹಲೋಕ ತ್ಯಜಿಸಿದ ಪತ್ನಿ

Kadaba Times News

 ಕಡಬ ಟೈಮ್, (KADABA TIMES)ಸುಳ್ಯ:  ಪತಿಯ  ಉತ್ತರಕ್ರಿಯೆ ದಿನದಂದು ಪತ್ನಿ ಅಸ್ವಸ್ಥಗೊಂಡು ನಿಧನ ಹೊಂದಿದ  ಘಟನೆಯೊಂದು ಸುಳ್ಯ  ಕನಕಮಜಲಿನಲ್ಲಿ  ನಡೆದಿದೆ.



ಕನಕಮಜಲು ಗ್ರಾಮದ ನೆಡಿಲು ಸೋಮಪ್ಪ ಗೌಡ ಅವರು . 17ರಂದು ನಿಧನ ಹೊಂದಿದ್ದರು.  ನಿಧನ ಹೊಂದಿ  ಹನ್ನೊಂದನೇ ದಿನದ ಕಾರ್ಯಕ್ರಮ (ಎ. 28ರಂದು ) ನಡೆಯುತ್ತಿತ್ತು.


ಮಧ್ಯಾಹ್ನದ ವೇಳೆಗೆ ಪತ್ನಿ ಸುಬ್ಬಕ್ಕ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ .  ಸುಳ್ಯ ಆಸ್ಪತ್ರೆಗೆ ಕರೆತಂದರೂ ವೇಳೆಗಾಗಲೇ ಮೃತರಾಗಿದ್ದರು . ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top