ಸುಬ್ರಹ್ಮಣ್ಯ: ಇಲಿ ಪಾಷಾಣ ಸೇವಿಸಿ ಅಸ್ಪಸ್ಥಗೊಂಡ ವ್ಯಕ್ತಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಮೃತ್ಯು

ಸುಬ್ರಹ್ಮಣ್ಯ: ಇಲಿ ಪಾಷಾಣ ಸೇವಿಸಿ ಅಸ್ಪಸ್ಥಗೊಂಡ ವ್ಯಕ್ತಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಮೃತ್ಯು

Kadaba Times News
0

 ಕಡಬ ಟೈಮ್ ,ಸುಬ್ರಹ್ಮಣ್ಯ :  ವ್ಯಕ್ತಿಯೊಬ್ಬರು  ಇಲಿ ಪಾಷಾಣ ಸೇವಿಸಿ ಅಸ್ಪಸ್ಥಗೊಂಡು ಆಸ್ಪತ್ರೆಗೆ ಕೊಂಡೊಯ್ದರೂ ಮೃತಪಟ್ಟ ಬಗ್ಗೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಏನೆಕಲ್ಲು ಗ್ರಾಮದಿಂದ   ವರದಿಯಾಗಿದೆ.

ಸಾಂದರ್ಭಿಕ ಚಿತ್ರ( KADABA TIMES)


ಸುಬ್ರಹ್ಮಣ್ಯದ ಏನೆಕಲ್ಲು ಗ್ರಾಮದ ತುಂಬತ್ತಾಜೆಯ ಬಾಲಕೃಷ್ಣ ಗೌಡ  ಎಂಬವರು ಮೃತಪಟ್ಟವರು.


ಕೃಷಿ ಕೆಲಸ ಮಾಡಿಕೊಂಡಿದ್ದ ಇವರು  ರಕ್ತದೊತ್ತಡದಿಂದ ಬಳಲುತ್ತಿದ್ದರು.  ಹೀಗಾಗಿ ಪಂಜದ ವೈದ್ಯರಲ್ಲಿ ಔಷಧಿ ಮಾಡಿಕೊಂಡಿದ್ದರೂ ಸಹ ಕಡಿಮೆಯಾಗದಿದ್ದರಿಂದ ಬೇಸರದಿಂದರು ಎನ್ನಲಾಗಿದೆ.  ಜ.6 ರಂದು ಮನೆಯವರಿಗೆ   ವಾಂತಿ ಬರುವುದಾಗಿ ತಿಳಿಸಿದ್ದು,  ಉಪಚರಿಸಿ ಕಾಣಿಯೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ವಾಂತಿ ಮಾಡಿಕೊಂಡಿದ್ದರು.


ವಿಚಾರಿಸಿದಾಗ ಇಲಿ ಪಾಷಾಣ ಸೇವಿಸಿರುವುದಾಗಿ ತಿಳಿಸಿದ್ದು, ಬಳಿಕ ಕಾಣಿಯೂರಿನ ಕ್ಲಿನಿಕ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈಧ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ  ಆಸ್ಪತ್ರೆಗೆ ಕರೆದುಕೊಂಡು ಹೋದಾಗ  ವೈಧ್ಯರು ಪರೀಕ್ಷಿಸಿ  ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.


ಮೃತರ ಮಗ ಕುಲ್ಕುಂದದ  ಸತ್ಯನಾರಾಯಣ  ಎಂಬವರು ನೀಡಿದ ದೂರಿನಂತೆ   ಸುಬ್ರಹ್ಮಣ್ಯ ಠಾಣೆ ಯುಡಿಆರ್ ನಂಬ್ರ: 01/2025 ಕಲಂ:   194 BNSS ಯಂತೆ ಪ್ರಕರಣ ದಾಖಲಾಗಿರುತ್ತದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top