ಆಲಂಕಾರಿನಲ್ಲಿ ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಸುಟ್ಟು ಹೋದ ಮನೆಯ ಅಮೂಲ್ಯ ವಸ್ತುಗಳು

ಆಲಂಕಾರಿನಲ್ಲಿ ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಸುಟ್ಟು ಹೋದ ಮನೆಯ ಅಮೂಲ್ಯ ವಸ್ತುಗಳು

Kadaba Times News
0

ಮಕ್ಕಳು ತಮ್ಮ ಶಾಲೆಯ ವಾರ್ಷಿಕೋತ್ಸವದ ಕಾರಣ ಹೊಗಿದ್ದು  ಮಕ್ಕಳ ಕಾರ್ಯಕ್ರಮ ನೋಡುವ ಸಲುವಾಗಿ  ಕೂಲಿ ಕೆಲಸ ಮುಗಿಸಿ ವಿನೊದ ಅವರು  ಶಾಲೆಗೆ ತೆರಳಿದ್ದರು

 

 ಕಡಬ ಟೈಮ್ಸ್, ಆಲಂಕಾರು: :  ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ  ಮನೆಯ  ವಸ್ತುಗಳು  ಸಂಪೂರ್ಣ  ಸುಟ್ಟು ಹೋದ ಘಟನೆ ಜ. 7 ( ಮಂಗಳವಾರ)  ರಾತ್ರಿ ಆಲಂಕಾರಿನಲ್ಲಿ ನಡೆದಿದೆ.


ಕಡಬ ತಾಲೂಕು  ಆಲಂಕಾರು  ಗ್ರಾಮದ ನೆಕ್ಕಿಲಾಡಿ ವಿನೋದಾ ಅವರ ಮನೆ ಬೆಂಕಿಗೆ ಆಹುತಿಯಾಗಿರುವುದಾಗಿದೆ.



 ವಿನೋದಾ ಅವರು ಪತಿಯನ್ನು ಕಳೆದುಕೊಂಡ ಬಳಿಕ ಇಬ್ಬರು ಮಕ್ಕಳೊಂದಿಗೆ ಚಿಕ್ಕದೊಂದು ಹಂಚಿನ ಮನೆಯಲ್ಲಿ ವಾಸಿಸುತಿದ್ದರು. ಮಕ್ಕಳು ತಮ್ಮ ಶಾಲೆಯ ವಾರ್ಷಿಕೋತ್ಸವದ ಕಾರಣ ಹೊಗಿದ್ದು  ಮಕ್ಕಳ ಕಾರ್ಯಕ್ರಮ ನೋಡುವ ಸಲುವಾಗಿ  ಕೂಲಿ ಕೆಲಸ ಮುಗಿಸಿ ವಿನೊದ ಅವರು  ಶಾಲೆಗೆ ತೆರಳಿದ್ದರು.


ಸುಮಾರು ರಾತ್ರಿ 8 ರ ವೇಳೆ  ವಿದ್ಯುತ್  ಶಾರ್ಟ್ ಸಕ್ಯೂಟ್‌ನಿಂದ  ಅವಘಡ ಸಂಭವಿಸಿದ್ದು ಸ್ಥಳೀಯರು ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಮನೆ ಕಡೆ ತೆರಳಿ ಪರಿಶೀಲಿಸಿದಾಗ ಬೆಂಕಿ ಮನೆಯೊಳಗೆ ಆವರಿಸಿರುವುದನ್ನು ಗಮನಿಸಿದ್ದರು. 



ತಕ್ಷಣ ಮನೆಯೊಡತಿಗೆ ವಿಚಾರ ತಿಳಿಸಿ ಮನೆ ಬಾಗಿಲು ಮುರಿದು ನೀರು ಹಾಕಿದ್ದರು. ಆ ವೇಳೆಗಾಗಲೆ ಮನೆಯ ಸೋಫಾ, ಬಟ್ಟೆ ಬರೆಗಳು ಬೆಂಕಿಗೆ ಆಹುತಿಯಾಗಿತ್ತು.  ಹೊರಗಡೆ ಒಣಗಳು ಹಾಕಿದ್ದ ಬಟ್ಟೆ ಮಾತ್ರ ಉಳಿದಿದ್ದು ಮಕ್ಕಳ ಪುಸ್ತಕಗಳು ಬೆಂಕಿಕೆಗೆ ಆಹುತಿಯಾಗಿದೆ , ಜೊತೆಗೆ ಅಮೂಲ್ಯ ದಾಖಲೆಗಳು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ. 


ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು,  ಪಂಚಾಯತಿ ಆಡಳಿಯ ಮಂಡಳಿ,  ಅಧಿಕಾರಿಗಳು, ತೆರಳಿ ಪರಿಶೀಲನೆ ನಡೆಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top