



ಕಡಬ: ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆ ಮತ್ತು ಗ್ರಾಮ ಮಟ್ಟದ ಕರು ಪ್ರದರ್ಶನವು ನಾಳೆ ( ಜ.4 ರಂದು) 10 ರಿಂದ ಕಡಬ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆಯಲಿದೆ.
ಕರು ಪ್ರದರ್ಶನ, ಹಾಲು ಕರೆಯುವ ಸ್ಪರ್ಧೆ,ಹೈನುಗಾರಿಕಾ ವಿಚಾರ ಸಂಕೀರ್ಣ,ಮಾಹಿತಿ ಶಿಬಿರ, ವಸ್ತು ಪ್ರದರ್ಶನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜಯಚಂದ್ರ ರೈ ಕುಂಟೋಡಿ, ಮುಖ್ಯ ಕಾರ್ಯನಕರ್ವಹಣಾಧಿಕಾರಿ ಕುಂಞಣ್ಣ ಕುದ್ರಡ್ಕ ತಿಳಿಸಿದ್ದಾರೆ.
ಪಶುಪಾಲನಾ ಮತ್ತು ಪಶುವೈಧ್ಯಕೀಯ ಸೇವಾ ಇಲಾಖೆ ಮಂಗಳೂರು ಮತ್ತು ದ.ಕ.ಸ.ಹಾ.ಉ.ಒಕ್ಕೂಟ ನಿ. ಮಂಗಳೂರು ಇದರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.