




ಕಡಬ ಟೈಮ್, ಸುಳ್ಯ :ಕುಡಿದು ಬಂದ ಪತಿಯ ಕಿರಿಕಿರಿ ತಡೆಯಲಾಗದೆ ಮಾತಿಗೆ ಮಾತು ಬೆಳೆದು ಪತ್ನಿಯು ಕೋಪಗೊಂಡು ಸೌಟಿನಿಂದ ಹಿಗ್ಗಾಮುಗ್ಗಾ ಬಾರಿಸಿದ್ದು ಪತಿ ಆಸ್ಪತ್ರೆಗೆ ದಾಖಲಾದ ಘಟನೆಯೊಂದು ಸುಳ್ಯ ಗಡಿಭಾಗವಾಗಿರುವ ಪೆರಾಜೆ ಗ್ರಾಮದಲ್ಲಿ ನಡೆದಿದೆ.
ತಡ
ರಾತಿ ಇಬ್ಬರ ನಡುವೆ ಕೌಟುಂಬಿಕ ವಿಚಾರವಾಗಿ ವಾಗ್ವಾದ ನಡೆದಿದ್ದು ನಂತರದ ಬೆಳವಣಿಗೆಯಲ್ಲಿ ಪತ್ನಿಯು
ಪತಿಗೆ ಹಿಗ್ಗಾಮುಗ್ಗಾ ಬಾರಿಸಿರುವುದಾಗಿದೆ. ಸೌಟಿನಲ್ಲಿ
ಬಾರಿಸಿದ ರಭಸಕ್ಕೆ ಪತಿ ನೆಲಕ್ಕೆ ಉರುಳಿಬಿದ್ದು ತಲೆಗೆ ಗಾಯವಾಗಿರುವುದಾಗಿ ಮಾಹಿತಿ ಲಭಿಸಿದೆ.
ಗಾಯಗೊಂಡ
ಪತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.