ಕಡಬ: ಕುಮಾರಧಾರ ನದಿಯಲ್ಲಿ ಭಾರೀ ಅಕ್ರಮ ಮರಳುಗಾರಿಕೆ: ಮರಳು ತೆಗೆಯುತಿದ್ದ ಬೋಟ್ ಕಟ್ಟಿ ಹಾಕಿದ ಗ್ರಾಮಸ್ಥರು

ಕಡಬ: ಕುಮಾರಧಾರ ನದಿಯಲ್ಲಿ ಭಾರೀ ಅಕ್ರಮ ಮರಳುಗಾರಿಕೆ: ಮರಳು ತೆಗೆಯುತಿದ್ದ ಬೋಟ್ ಕಟ್ಟಿ ಹಾಕಿದ ಗ್ರಾಮಸ್ಥರು

Kadaba Times News
0



ಅಕ್ರಮ ಮರಳುಗಾರಿಕೆ ಮಾಡಲು ಬಳಸುತ್ತಿದ್ದ ಬೋಟ್ ಕಟ್ಟಿ ಹಾಕಿದ ಗ್ರಾಮಸ್ಥರು

 ಕಡಬ: ಕಡಬ ತಾಲೂಕಿನ ಹಲವೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ. ಈ ಬೆನ್ನಲ್ಲೇ ಕಡಬ ತಾಲೂಕಿನ  ಚಾರ್ವಾಕ ಗ್ರಾಮದ ಕುಮಾರಧಾರ ನದಿಯಲ್ಲಿ ನಡೆಯುವ ಅಕ್ರಮ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.


ಚಾರ್ವಾಕ ಕುಂಬ್ಲಾಡಿ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇರಿದ ಊರವರು ಚಾರ್ವಾಕ ಗ್ರಾಮದ ಭಾಗದಲ್ಲಿ ಮರಳುಗಾರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಮರಳುಗಾರಿಕೆಯಿಂದ ದೈವಸಾನಿಧ್ಯ ನಾಶ ಮತ್ತು ಪ್ರಕೃತಿ ನಾಶವಾದ ಕಾರಣ ಊರವರು ಮರಳುಗಾರಿಕೆಗೆ ವಿರೋಧ ವ್ಯಕ್ತಪಡಿಸಿ ಸಂಬಂಧಪಟ್ಟ ಕಾಣಿಯೂರು ಗ್ರಾಮ ಪಂಚಾಯತಿಗೂ ಮನವಿ ಸಲ್ಲಿಸಿ ಇಲಾಖೆಗಳಿಗೆಲ್ಲ ಮರಳುಗಾರಿಕೆ ನಡೆಸದಂತೆ ಪತ್ರ ಬರೆದಿದ್ದಾರೆ.


ಚಾರ್ವಾಕ ಭಾಗದಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ನದಿಯ ಮತ್ತೊಂದು ಭಾಗವಾದ ಕಡಬ ತಾಲೂಕಿನ ಪೆರಾಬೆ  ಗ್ರಾಮದ ಕುಂಟ್ಯಾನದಿಂದ ಯಾಂತ್ರಿಕೃತ ಬೋಟ್ ಗಳ ಮೂಲಕ ಮರಳುಗಾರಿಕೆ ನಡೆಸುತ್ತಿದ್ದ ತಂಡ ಬೋಟ್ ಗಳನ್ನು ಚಾರ್ವಾಕ ಭಾಗಕ್ಕೆ ತಂದು ಮರಳುಗಾರಿಕೆ ಪ್ರಾರಂಭಿಸಿದವು.


ಎರಡು ದಿನದ ಹಿಂದೆ ಚಾರ್ವಾಕ ಭಾಗದಲ್ಲಿ ಮರಳುಗಾರಿಕೆಗೆ ಬಂದ ತಂಡಕ್ಕೆ ಊರವರ ಪ್ರತಿರೋಧ ವ್ಯಕ್ತಪಡಿಸಿದಾಗ ಪರಾರಿಯಾಗಿತ್ತು.  .29ರಂದು ಮತ್ತೆ ಬೋಟ್ ಮೂಲಕ ತಂಡ ಬಂದಾಗ ಬೋಟನ್ನು ಹಿಡಿದು ಚಾರ್ವಾಕ ಭಾಗದಲ್ಲಿ ಕಟ್ಟಿ ಹಾಕಲಾಗಿತ್ತು. ಬೋಟ್ ನಲ್ಲಿದ್ದ ಮರಳು ಕಾರ್ಮಿಕರು ಈಜಿ ಆಚೆ ಬದಿಗೆ ಪರಾರಿಯಾಗಿದ್ದಾರೆ. ಜಿಲ್ಲಾಡಳಿತ ಅಕ್ರಮ ಮರಳುಗಾರಿಕೆ ನಿಲ್ಲಿಸದಿದ್ದರೆ ಕುಮಾರಧಾರ ನದಿಯ ಎರಡು ಭಾಗದ ಕಡೆಯಿಂದಲೂ ಮುಂದಿನ ದಿನಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಲಿದೆ ಎನ್ನುತ್ತಾರೆ ಗ್ರಾಮಸ್ಥರು.


ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ತಹಶೀಲ್ದಾರ್ ಆಗಲಿ ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ  .

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top