


ಕಡಬ: ಐತ್ತೂರು ಗ್ರಾ.ಪಂ ವ್ಯಾಪ್ತಿಯ ಮರ್ದಾಳ ಹಾಗೂ ಸುಂಕದಕಟ್ಟೆ ಹಸಿ ಮೀನು ಸ್ಟಾಲ್ ಏಲಂ ಪ್ರಕ್ರಿಯೆ ನ.28ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆದಿದ್ದು ಭಾರೀ ಮೊತ್ತಕ್ಕೆ ಏಲಂ ಆಗಿದೆ.
ಕಳೆದ ವರ್ಷ ರೂ.15,500ಕ್ಕೆ ಏಲಂ ಆಗಿದ್ದ ಮರ್ದಾಳ ಹಸಿಮೀನು ಸ್ಟಾಲ್ ಈ ಬಾರಿ ಬರೋಬ್ಬರಿ ರೂ. 4,10,000 ಕ್ಕೆ ಏಲಂ ಆಗಿದೆ. ಅಬೂಬಕ್ಕರ್ ಎಂಬವರು ಏಲಂ ಮೂಲಕ ಪಡೆದುಕೊಂಡಿದ್ದಾರೆ. ಅದೇ ರೀತಿ ಕಳೆದ ವರ್ಷ ರೂ.15500ಕ್ಕೆ ಏಲಂ ಆಗಿದ್ದ ಸುಂಕದಕಟ್ಟೆ ಹಸಿಮೀನು ಸ್ಟಾಲ್ ಈ ಬಾರಿ ರೂ.1,10,000ಕ್ಕೆ ಏಲಂ ಆಗಿದೆ. ಅದ್ರಾಮ ಎಂಬವರು ಏಲಂ ಮೂಲಕ ಪಡೆದುಕೊಂಡಿದ್ದಾರೆ.
ಏಲಂ ಪ್ರಕ್ರಿಯೆಯಲ್ಲಿ ಸರ್ಪುದ್ದೀನ್, ಅಬೂಬಕ್ಕರ್, ಅದ್ರಾಮ, ಮೋಹನ್, ಅಶ್ರಫ್, ಹಾರಿಸ್, ವಿನಯ, ರಘುರಾಜ್ ಭಾಗವಹಿಸಿದ್ದರು .ಪಿಡಿಓ ಸುಜಾತ ಕೆ ಅವರು ಏಲಂ ಸಂಬಂಧಿತ ವಿಚಾರಗಳ ಬಗ್ಗೆ ಬಿಡ್ಡುದಾರರಿಗೆ ಮಾಹಿತಿ ನೀಡಿದರು. ಗ್ರಾ.ಪಂ ಅಧ್ಯಕ್ಷೆ ವತ್ಸಲಾ, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯ ಮನಮೋಹನ್ ಗೋಳ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಶಿಬು ಸಹಕರಿಸಿದರು.