ವೃದ್ದ ಮಹಿಳೆಯ ಮನೆಗೆ ತನ್ನ ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿ ಕೊಟ್ಟ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ

ವೃದ್ದ ಮಹಿಳೆಯ ಮನೆಗೆ ತನ್ನ ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿ ಕೊಟ್ಟ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ

Kadaba Times News
0

 

ಹಿರಿಯ ಮಹಿಳೆಯ ಮನೆಗೆ ರಸ್ತೆ ನಿರ್ಮಿಸಿರುವುದು(kadaba times)

ಕಡಬ ಟೈಮ್ಸ್, ಉಪ್ಪಿನಂಗಡಿ: ಹಲವು  ವರ್ಷಗಳಿಂದ ರಸ್ತೆಯೇ ಇಲ್ಲದೆ ಸಂಕಷ್ಟ ಪಡುತ್ತಿದ್ದ ಹಿರಿಯ ಮಹಿಳೆಗೆ  ದೇವಸ್ಥಾನವೊಂದರ  ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ತನ್ನ ಸ್ವಂತ ಖರ್ಚಿನಿಂದ ರಸ್ತೆ ನಿರ್ಮಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


ಉಪ್ಪಿನಂಗಡಿಯ  34 ನೆಕ್ಕಿಲಾಡಿಯ ತಾಳೆಹಿತ್ಲು ನಿವಾಸಿ ದೇವಕಿ ಎಂಬವರ  ಮನೆಗೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್ ರಸ್ತೆ ನಿರ್ಮಿಸಿಕೊಟ್ಟವರು.


ಈ ಹಿರಿಯ ಮಹಿಳೆ  ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಇವರ ಮನೆಗೆ ಹೋಗಲು ರಸ್ತೆಯೇ ಇರಲಿಲ್ಲ. ರಸ್ತೆಗೆ ಬೇಕಾದ ಜಾಗ ಇತ್ತಾದರೂ,  ಅದನ್ನು ರಸ್ತೆಯಾಗಿ ಮಾರ್ಪಡಿಸಲು ಇವರಿಗೆ ಆರ್ಥಿಕ ಸಂಕಷ್ಟದಿಂದಾಗಿ ಸಾಧ್ಯವಾಗಿರಲಿಲ್ಲ.  ಇಲ್ಲಿ ಎರಡು ಬಡ ಕುಟುಂಬಗಳ  ಮನೆ ಇದ್ದು   ಅಜ್ಜಿ ಮನೆಗೆ ಹೋಗುವ ದಾರಿ ಅರ್ಧ ಭಾಗ ಸಾರ್ವಜನಿಕ ಜಮೀನಿನಲ್ಲಿದ್ದರೆ, ಮತ್ತೆ ಅರ್ಧ ಭಾಗ ಅಜ್ಜಿಯ ಜಾಗದಲ್ಲಿದೆ.

 

ಹಲವು ವರ್ಷಗಳಿಂದ ಗ್ರಾ.ಪಂ.ನಲ್ಲಿ ಕೂಡಾ ಇವರು ರಸ್ತೆ ನಿರ್ಮಿಸಿಕೊಡಲು ಕೇಳಿಕೊಂಡರೂ ರಸ್ತೆ ನಿರ್ಮಾಣ ಆಗಿರಲಿಲ್ಲ. ಇದ್ದ ಕಾಲು ದಾರಿಯೂ ಗಿಡ- ಗಂಟಿಗಳಿಂದ ತುಂಬಿ ಹೋಗಿತ್ತು.  34 ನೆಕ್ಕಿಲಾಡಿ ಗ್ರಾಮದ  ಕಾಂಗ್ರೆಸ್ ವಲಯಾಧ್ಯಕ್ಷೆಯಾಗಿರುವ  ಅನಿ ಮಿನೇಜಸ್ ಅವರಲ್ಲಿ ಅಜ್ಜಿ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದು, ಇದನ್ನು ಇವರು ಹಲವಾರು ಸಮಾಜಮುಖಿ ಕೆಲಸಗಳಿಗೆ ಕೈಜೋಡಿಸಿರುವ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್ ಅವರ ಬಳಿ ಹೇಳಿ ನೆರವಿಗೆ ಮನವಿ ಮಾಡಿದರು.


ಕೂಡಲೇ ಸ್ಪಂದಿಸಿದ ರಾಧಾಕೃಷ್ಣ ನಾಯ್ಕ್ ಅವರು ಹಿಟಾಚಿಯನ್ನು ಕಳುಹಿಸಿಕೊಟ್ಟಿದ್ದು, ಸುಮಾರು ಐದೂವರೆ ಗಂಟೆಗಳಷ್ಟು ಕಾಲ ಹಿಟಾಚಿಯಲ್ಲಿ ಕೆಲಸ ಮಾಡಿ ಅಜ್ಜಿಯ ಮನೆ ಬಾಗಿಲಿನ ತನಕ ಸುಂದರವಾದ ರಸ್ತೆಯನ್ನು ನಿರ್ಮಿಸಿಕೊಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈಗ ಎರಡೂ ಮನೆಗಳಿಗೆ ರಸ್ತೆಯಾದಂತಾಗಿದೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top