ಕಡಬದಲ್ಲಿ ಪ್ರತಿಭಟನೆ ವೇಳೆ ತಹಶೀಲ್ದಾರ್ ಪರ ಬ್ಯಾಟಿಂಗ್ ಮಾಡಲು ಬಂದ ಕೈ ಮುಖಂಡನ ಚಳಿ ಬಿಡಿಸಿದ ಮಹಿಳೆ

ಕಡಬದಲ್ಲಿ ಪ್ರತಿಭಟನೆ ವೇಳೆ ತಹಶೀಲ್ದಾರ್ ಪರ ಬ್ಯಾಟಿಂಗ್ ಮಾಡಲು ಬಂದ ಕೈ ಮುಖಂಡನ ಚಳಿ ಬಿಡಿಸಿದ ಮಹಿಳೆ

Kadaba Times News
0

 


ಕಡಬ:  ವೃದ್ದ ದಂಪತಿಗಳ  ಮನೆ ದ್ವಂಸ ಪ್ರಕರಣ ಸಂಬಂಧಿಸಿ  ಅಧಿಕಾರಿಗಳ  ದೌರ್ಜನ್ಯ ಖಂಡಿಸಿ ಕಡಬ ತಹಶೀಲ್ದರ್ ಕಚೇರಿ ಮುಂದೆ ಪ್ರತಿಭಟನೆ ನಡೆಯುತ್ತಿದ್ದ ವೇಳೆ   ತಹಶೀಲ್ದಾರ್ ಪರ ಮಾತನಾಡಲು ಬಂದ   ಕಾಂಗ್ರೆಸ್ ಮುಖಂಡನಿಗೆ ಮಹಿಳೆಯೊಬ್ಬರು ಚಪ್ಪಲು ತೋರಿಸಿ  ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಕಡಬದಲ್ಲಿ ನ.20 ರಂದು ನಡೆದಿದೆ.


ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.    ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕಚೇರಿಯತ್ತ ತೆರಳದಂತೆ ಪೊಲೀಸರು ಬ್ಯಾರಿಕೇಡ್ ಇರಿಸಿದ್ದರು.  ಈ ಸಂದರ್ಭ ಮಿನಿ ವಿಧಾನ ಸೌಧದ ಆವರಣದಲ್ಲಿರುವ ಕೈ ಮುಖಂಡ ತಹಶೀಲ್ದಾರ್ ಪರ ಮಾತಿಗೆ ಇಳಿದಿದ್ದರು.  ಆ ವೇಳೆ  ಆತನನ್ನು ತರಾಟೆಗೆ ತೆಗೆದುಕೊಂಡ ಕಾರಣ ಅಲ್ಲಿಂದ ಕಾಲ್ಕಿತ್ತಿದ್ದರು.


ಕೆಲ ಸಮಯದ ಬಳಿಕ ಮತ್ತೆ ರಸ್ತೆ ಬದಿ ಬಂದು ತಕರಾರು ಎಬ್ಬಿಸಿದ್ದ ಪ್ರತಿಭಟನ ನಿರತ ಮುಖಂಡೆಯೊಬ್ಬರು  ಆತನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.  ಮಾತಿಗೆ ಮಾತು ಬೆಳೆದು ಮುಖಂಡೆ ಚಪ್ಪಲು ತೆಗೆಯುವ  ಹಂತಕ್ಕೆ ಹೋಗಿದ್ದು ಈ ವೇಳೆ ಪೊಲೀಸರು ಆಕೆಯನ್ನು ತಡೆದಿದ್ದಾರೆ.


ಆಕೆಯನ್ನು ಕಳಿಸಿ ಎಂದು ಕೈ ಮುಖಂಡ  ಪೊಲೀಸರಿಗೆ ಸೂಚಿಸುತ್ತಿರುವುದು ವೀಡಿಯೋದಲ್ಲಿದ್ದು ವೈರಲ್ ಆಗಿದೆ.   ಪೊಲೀಸರು ಅಸಹಾಯಕರಂತೆ ನಿಂತಿರುವುದು ವೀಡಿಯೋದಲ್ಲಿದೆ. ಎಲ್ಲರೂ ವೃದ್ದ ದಂಪತಿಗಳಿಗೆ ನ್ಯಾಯ ಒದಗಿಸಿ ಎಂದು ಪ್ರತಿಭಟನೆಗೆ ಕೈ ಜೋಡಿಸಿದರೆ,  ಕ್ತೈ ಮುಖಂಡನ ವರ್ತನೆ ನೋಡಿ  ಜನ  ಅಚ್ಚರಿಯಿಂದ ನೋಡುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top