ಕಡಬದ ಮೊಬೈಲ್ ಶಾಪ್ ನಿಂದ ಮೊಬೈಲ್ ಕದ್ದು ಪರಾರಿಯಾದ ಯುವಕ: ಸಿಸಿಟಿವಿ ಯಲ್ಲಿ ದಾಖಲಾಯ್ತು ಕಳ್ಳತನದ ದೃಶ್ಯ

ಕಡಬದ ಮೊಬೈಲ್ ಶಾಪ್ ನಿಂದ ಮೊಬೈಲ್ ಕದ್ದು ಪರಾರಿಯಾದ ಯುವಕ: ಸಿಸಿಟಿವಿ ಯಲ್ಲಿ ದಾಖಲಾಯ್ತು ಕಳ್ಳತನದ ದೃಶ್ಯ

Kadaba Times News

 

 ಅಂಗಡಿಯಿಂದ ಮೊಬೈಲ್ ಎಗರಿಸುತ್ತಿರುವ ದೃಶ್ಯ( kadaba times) 

ಕಡಬ:  ಇಲ್ಲಿನ ಮುಖ್ಯ ಪೇಟೆಯ ಮೊಬೈಲ್ ಅಂಗಡಿಯಿಂದ ಮಾರಾಟಕ್ಕೆ ಇಟ್ಟ ಮೊಬೈಲ್ ಸೆಟ್ ವೊಂದನ್ನು ಗ್ರಾಹಕನ ಸೋಗಿನಲ್ಲಿ ಬಂದ ಯುವಕನೊಬ್ಬ ಕದ್ದು ಪರಾರಿಯಾಗಿದ್ದು ವೀಡಿಯೋ ಸಾಮಾಜಿಕ ಜಾಣದಲ್ಲಿ ಹರಿದಾಡುತ್ತಿದೆ.


ಘಟನೆ .9ರಂದು(ಶನಿವಾರ) ಸಾಯಂಕಾಲ ನಡೆದಿದ್ದು ಆತ ಕದ್ದು ಕಿಸೆಗೆ ಹಾಕಿಕೊಳ್ಳುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.


ಮೊಬೈಲ್ ಅಂಗಡಿ ಮಾಲಕರು ಕೆಲಸದ ನಿಮಿತ್ತ  ಹೊರಗೆ ಹೋಗಿದ್ದು ಶಾಪ್ ನಲ್ಲಿ ಮತ್ತೋರ್ವ ಸಿಬ್ಬಂದಿ ಇನ್ನೊಂದು ಗ್ರಾಹಕರ ಜೊತೆ ಮಾತನಾಡುತ್ತಿದ್ದರು . ಅಂಗಡಿಗೆ ಬಂದಿದ್ದ ಯುವಕ ಎಲ್ಲೆಡೆ ನೋಡಿ ಮೊಬೈಲ್ ಕದ್ದು ಕಿಸೆಗೆ ಹಾಕಿಕೊಂಡು ಮತ್ತೆ ಅಲ್ಲಿಂದ ಪರಾರಿಯಾಗಿದ್ದಾನೆ.


ಬಜಕರೆಯ ವ್ಯಕ್ತಿಯೊಬ್ಬರು ಸೇಲ್ ಮಾಡಲು ಪೋನ್ ನೀಡಿದ್ದು ಈ ಬಗ್ಗೆ ವಿಚಾರಿಸಲು ಬಂದಾಗ  ಮೊಬೈಲ್ ಕಾಣೆಯಾಗಿರುವುದು ಗೊತ್ತಾಗಿದೆ. ಕೂಡಲೇ ಸಿಸಿಟಿವಿ ಪರಿಶೀಲಿಸಿದಾಗ ಬೊಳ್ಳೂರು ಸಮೀಪದ ಯುವಕ ಎಗರಿಸಿರುದು ಗೊತ್ತಾಗಿದೆ.


ಸ್ಥಳೀಯರ ನೆರವಿನಿಂದ ಆತನ ಮನೆಗೆ ಹೋಗಿ ವಿಚಾರಿಸಿದಾಗ ಆತ ಇಲ್ಲದಿರುದನ್ನು ಕಂಡು ಪೊಲೀಸ್ ದೂರು ನೀಡುವ ಎಚ್ಚರಿಕೆ ನೀಡಿದ್ದರು.  ಎರಡು ದಿನದ ಬಳಿಕ  ಕಡಬದ ಗೂಡಂಗಡಿಯೊಂದರಲ್ಲಿ ಮೊಬೈಲ್ ಇಟ್ಟು ಮಾಹಿತಿ ನೀಡಿ ಹೋಗಿರುವುದಾಗಿ ತಿಳಿದು ಬಂದಿದೆ.


ಈತ ಕೆಲ ದಿನಗಳ ಹಿಂದೆ ಇನ್ನೊಂದು ಮೊಬೈಲ್ ಶಾಪ್ ನಿಂದ ಮೆಮೋರಿ ಕಾರ್ಡ್ ಕದ್ದಿದ್ದ,ಇದಕ್ಕಿಂತ ಮೊದಲು ಬೈಕ್ ಎಗರಿಸಿ ತಗಲಾಕಿಕೊಂಡಿದ್ದ, ಇದಲ್ಲದೆ ಮದುವೆ ಮನೆಯಲ್ಲೂ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top