


ಕಡಬ: ಇಲ್ಲಿನ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರ ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ನೂಜಿಬಾಳ್ತಿಲ ಗ್ರಾಮದ
ಕುಬುಲಾಡಿ ನಿವಾಸಿ ಜೋಗಿ(54ವ) ಎಂಬವರು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿಯ ಪತ್ನಿ
ಎಂಟು ವರ್ಷಗಳ ಹಿಂದೆ ಮೃತಪಟ್ಟಿದ್ದು ಮೂವರು ಮಕ್ಕಳೊಂದಿಗೆ ವಾಸವಾಗಿದ್ದರು. ಬಳಿಕ ಮಕ್ಕಳು ಪುತ್ತೂರು
ಕಡೆ ಹೋದವರು ಮನೆಯತ್ತ ಮುಖ ಮಾಡಲಿಲ್ಲ .ಹೀಗಾಗಿ ಒಂಟಿಯಾಗಿ ಮನೆಯಲ್ಲೇ ವಾಸವಾಗಿದ್ದರು.ಪಕ್ಕದಲ್ಲೇ
ಇದ್ದ ತಂಗಿ ಮನೆಗೆ ಬಂದು ಹೋಗುತ್ತಿದ್ದು ನಾಲ್ಕು ದಿನಗಳಿಂದ ಕಾಣಸಿಗದ ಹಿನ್ನೆಲೆ ಎಲ್ಲಿಯಾದರೂ ಹೊಗಿರಬಹುದೆಂದು
ಭಾವಿಸಿದ್ದರು.
ನ.20ರಂದು ಪಕ್ಕದ ಮನೆಯಿಂದ ದುರ್ವಾಸನೆ ಬರುತ್ತಿದ್ದು ಅಲ್ಲಿಗೆ ತೆರಳಿ ಮನೆಯ ರೂಮಿನಲ್ಲಿ ಅಡ್ಡಕ್ಕೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿತ್ತು.
ಮನೆಯಲ್ಲಿ ಒಬ್ಬನೇ ವಾಸ್ತವ್ಯವಿದ್ದು, ಮಕ್ಕಳು ಕೂಡಾ ಮನೆಗೆ ಬಾರದೇ ಇದ್ದುದರಿಂದ ಇದೇ ಬೇಸರದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು
ಮೃತರ ತಂಗಿ ಗಿರಿಜ ಎಂಬವರು ನ್ಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.