ಹಳೆ ಮನೆ ಕೆಡವುತ್ತಿದ್ದಾಗ ಗೋಡೆ ಕುಸಿದು ಇಬ್ಬರು ಮೃತ್ಯು

ಹಳೆ ಮನೆ ಕೆಡವುತ್ತಿದ್ದಾಗ ಗೋಡೆ ಕುಸಿದು ಇಬ್ಬರು ಮೃತ್ಯು

Kadaba Times News

ಕಡಬ ಟೈಮ್ಸ್:  ಮಂಗಳೂರು ನಗರದ ಜೈಲು ರಸ್ತೆಯ ಬಳಿ ಹಳೆ ಮನೆಯೊಂದನ್ನು ಕೆಡವುತ್ತಿದ್ದಾಗ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.


ಜೇಮ್ಸ್ ಸ್ಯಾಮುವೆಲ್ ಜತ್ತನ್ನ ಮತ್ತು ಅಡ್ವಿನ್ ಮೃತ ದುರ್ದೈವಿಗಳು. ಗುರುವಾರ ಬೆಳಗ್ಗೆ ಘಟನೆ ನಡೆದಿದ್ದು, ಜೆಸಿಬಿ ಮೂಲಕ ಮನೆ ಕೆಡವುತ್ತಿದ್ದಾಗ ಕಾಂಕ್ರೀಟ್ ಲಿಂಟೆಲ್ ಸಹಿತ ಗೋಡೆ ಮೈಮೇಲೆ ಬಿದ್ದು ಮೃತಪಟ್ಟಿದ್ದಾರೆ.



ಜೇಮ್ಸ್ ಅವರು ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಿಸುವ ಉದ್ದೇಶದಿಂದ ಬಹರೈನ್ ನಿಂದ ಬಂದಿದ್ದರು. ಅಡ್ವಿನ್ ಪಕ್ಕದ ಮನೆಯವರಾಗಿದ್ದು ಸೋದರ ಸಂಬಂಧಿಯಾಗಿದ್ದರು.


ಮನೆ ಕೆಡಹುವಾಗ ಅವಘಡ ಸಂಭವಿಸದಿರಲೆಂಬ ಮುನ್ನೆಚ್ಚರಿಕೆಯಿಂದ ಜೆಸಿಬಿ ಆಪರೇಟರ್‌, ಸ್ಥಳದಲ್ಲಿ ನಿಲ್ಲದಂತೆ ಜೇಮ್ಸ್ಅವರಿಗೆ ತಿಳಿಸಿದ್ದರು. ಆದರೆ ದುರದೃಷ್ಟವಶಾತ್ಜೇಮ್ಸ್ ಕಡೆ ತೆರಳಿದ್ದಾಗಲೇ ಲಿಂಟಲ್ಕುಸಿದು ಬಿದ್ದು ಅನಾಹುತ ನಡೆದುಹೋಗಿದೆ ಎಂದು ತಿಳಿದು ಬಂದಿದೆ. ಕದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು  ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top