ಕಡಬ: ಕಟ್ಟಿಗೆ ತರಲೆಂದು ಹೋದ ಯುವಕ ತೋಡಿಗೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತ್ಯು

ಕಡಬ: ಕಟ್ಟಿಗೆ ತರಲೆಂದು ಹೋದ ಯುವಕ ತೋಡಿಗೆ ಬಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತ್ಯು

Kadaba Times News
0
ಕಡಬ : ಪಕ್ಕದ ರಬ್ಬರ್ ತೋಟಕ್ಕೆ ಕಟ್ಟಿಗೆ ತರಲೆಂದು ಹೋದ ವ್ಯಕ್ತಿಯೊಬ್ಬರು ತೋಡು ದಾಟುವ ವೇಳೆ ಆಕಸ್ಮಿಕವಾಗಿ ಬಿದ್ದು ನೀರಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಕಡಬದ ಮೀನಾಡಿ ಸಮೀಪದ  
 ನಿವಾಸಿ ಉಮೇಶ (35) ಮೃತಪಟ್ಟವರು.
ಮುಂಜಾನೆ ಕಟ್ಟಿಗೆ ತರಲೆಂದು ಸಮೀಪದ ಜಾಗಕ್ಕೆ ತೋಡು ದಾಟಿ ಹೋಗಿದ್ದರು. ಮದ್ಯಾಹ್ನವಾದರೂ ಮನೆಯತ್ತ ಬಾರದ ಕಾರಣ ಮನೆಮಂದಿ ಹುಡುಕಿಕೊಂಡು ಹೋಗಿದ್ದರು ಎಂದು ತಿಳಿದು ಬಂದಿದೆ. ಕಟ್ಟಿಗೆ ತರಲು ಹೋದ ಪ್ರದೇಶದಲ್ಲಿ ಹುಡುಕಾಡಿದರೂ ಪತ್ತೆಯಾಗದ ಕಾರಣ ತೋಡಿನ ಆಸುಪಾಸಿನಲ್ಲಿ ಹುಡುಕಲು ಆರಂಭಿಸಿದ್ದರು. ಸುಮಾರು ಒಂದು ಕಿ.ಮೀ ಕೆಳಗಡೆ ಪೇರಡ್ಕ ಸೇತುವೆ ಬಳಿ ಅಡ್ಡವಾಗಿ ಬಿದ್ದಿದ್ದ ಮರದ ತುಂಡಿನಲ್ಲಿ ಸಿಲುಕಿಕೊಂಡ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಈ ಹಿಂದೆಯೂ ಒಮ್ಮೆ  ಮನೆ ಸಮೀಪದ ತೊಡಿನ ಬಳಿ ಮೂರ್ಛೆಗೊಂಡು ಬಿದ್ದು ಸಾವಿನ ದವಡೆಯಿಂದ ಪಾರಾಗಿದ್ದರು ಎನ್ನಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top