




ಕಡಬ ಟೈಮ್ಸ್: ಧರ್ಮಸ್ಥಳ ಠಾಣಾ ವ್ಯಾಪ್ತಿಯ ಉಜಿರೆ ಸಮೀಪದ ಬೆಳಾಲು ಎಂಬಲ್ಲಿ ಹಾಡಹಗಲೇ ಮನೆಯ ಅಂಗಳದಲ್ಲೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆ.20ರಂದು ಸಂಜೆ ವರದಿಯಾಗಿದೆ.
ನಿವೃತ್ತ
ಶಿಕ್ಷಕ ಬಾಲಕೃಷ್ಣ ಭಟ್(83) ಕೊಲೆಯಾದ ವ್ಯಕ್ತಿ. ಇವರ ತಲೆಯ
ಭಾಗಕ್ಕೆ ಕಲ್ಲು ಹಾಕಿ ಅಥವಾ ಮಾರಾಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೆಳಾಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಇರುವ ಮನೆಯಲ್ಲಿ ಘಟನೆ ನಡೆದಿದೆ.ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.