




ಕಡಬ: ಮಂದಿರ, ಮಸೀದಿ, ಚರ್ಚ್ ಈ ಮೂರು ಧಾರ್ಮಿಕ ಕೇಂದ್ರಗಳಿರುವ ಕೋಡಿಂಬಾಳದಲ್ಲಿ ಈ ಬಾರಿಯ 78ನೇ ಸ್ವಾತಂತ್ರೋತ್ಸವವನ್ನು ಇಲ್ಲಿನ ಯುವಕರ ತಂಡ ಊರಿನ ಹಬ್ಬದಂತೆ ಆಚರಿಸಿ ಸಂಭ್ರಮಿಸಿದೆ.
ಕೋಡಿಂಬಾಳ
ಪೇಟೆಯಲ್ಲಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ, ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ, ವರ್ತಕರಿಗೆ
ಸಿಹಿ ಮತ್ತು ಪಾನೀಯ ಹಂಚಿ ಎಸ್ ಎಸ್.ಎಫ್ ತಂಡದ ಸದಸ್ಯರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಒಂದೆಡೆ ಸರ್ಕಾರಿ ಓಂತ್ರಡ್ಕ ಶಾಲೆಯ ಮಕ್ಕಳು, ಶಿಕ್ಷಕರು, ಪೋಷಕರು ಮೆರವಣಿಗೆ ಮೂಲಕ ಕೋಡಿಂಬಾಳ ಪೇಟೆಗೆ ಆಗಮಿಸಿದ್ದರು. ಮತ್ತೊಂದೆಡೆ
ಮದ್ರಸದ ವಿದ್ಯಾರ್ಥಿಗಳು ಮೆರವಣಿಗೆ ಬಂದು ಒಂದೆಡೆ ಸೇರಿದ್ದರು.
ಇದೇ
ಸಂದರ್ಭದಲ್ಲಿ ರಹ್ಮಾನಿಯ ಜುಮ್ಮಾ ಮಸೀದಿಯಲ್ಲಿ ಜಮಾತ್ ಖತೀಬರಾದ ಅಬೂಬಕ್ಕರ್ ಮದನಿ ಉಸ್ತಾದ್, ಜಮಾತ್
ಅಧ್ಯಕ್ಷರಾದ ಫಝಲ್ ಕೋಡಿಂಬಾಳ ನೇತೃತ್ವದಲ್ಲಿ ದ್ವಜಾರೋಹಣ
ನೆರವೇರಿಸಲಾಗಿತ್ತು. ಈ ಸಂದರ್ಭ ಸ್ಥಳದಲ್ಲಿದ್ದ ಎಸ್ ಎಸ್.ಎಫ್ ತಂಡದ ಎಲ್ಲರಿಗೂ
ಸಿಹಿ ಹಂಚಿದ್ದಾರೆ.