ಅಕ್ರಮ ದನಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ ಸ್ಥಳೀಯರು:ಪ್ರಕರಣ ದಾಖಲಿಸಿಕೊಂಡ ಸುಳ್ಯ ಪೊಲೀಸರು

ಅಕ್ರಮ ದನಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದ ಸ್ಥಳೀಯರು:ಪ್ರಕರಣ ದಾಖಲಿಸಿಕೊಂಡ ಸುಳ್ಯ ಪೊಲೀಸರು

Kadaba Times News

 ಕಡಬ ಟೈಮ್ಸ್: ಗೂಡ್ಸ್ ಟೆಂಪೋ ವಾಹನದಲ್ಲಿ  ಅಕ್ರಮ ದನಸಾಗಾಟ ಆಗುತ್ತಿರುವ  ಬಗ್ಗೆ ತಿಳಿದ   ಸ್ಥಳೀಯರು ವಾಹನ  ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಸುಳ್ಯದಿಂದ ವರದಿಯಾಗಿದೆ.



ಆ.19ರಂದು ಈ ಘಟನೆ ನಡೆದಿದ್ದು ವಾಹನದಲ್ಲಿ ಒಂದು ಹಸು ಮತ್ತು ಒಂದು ದನ ಇದ್ದು ಪಿರಿಯಾಪಟ್ಟಣ ಕಡೆಗೆ ಕೊಂಡೆಯ್ಯುತ್ತಿದ್ದರು ಇಂದು ತಿಳಿದು ಬಂದಿದೆ. ಸುಳ್ಯ ಪೊಲೀಸರು ದನಸಾಗಾಟ ಮಾಡುತ್ತಿದ್ದವರನ್ನು ಮತ್ತು ವಾಹನವನ್ನು ಠಾಣೆಗೆ ತಂದು ವಿಚಾರಣೆ ನಡೆಸಿದ್ದರು.


ಈ ಘಟನೆಗೆ ಸಂಬಂಧಿಸಿ   ಸಾಕಿಮ್ ,ಜಮೀನ್ ಪಾಷಾ,  ಸರ್ಪೂದ್ದೀನ್  ಎಂಬವರನ್ನು ವಿಚಾರಣೆಗೆ ಒಳಪಡಿಸಿದಾಗ   ಯಾವುದೇ ಪರವಾನಿಗೆ ಹೊಂದದೇ ಜಾನುವಾರು ಸಾಗಿಸುತ್ತಿರುವುದು ಪೊಲೀಸರಿಗೆ ತಿಳಿದುಬಂದಿದೆ.


ಜಾನುವಾರು ಹಾಗೂ ಸಾಗಾಟಕ್ಕೆ ಬಳಸಿದ ವಾಹನದೊಂದಿಗೆ ವಶಕ್ಕೆ ಪಡೆದು ಸುಳ್ಯ ಪೊಲೀಸರು .ಕ್ರ: 100/2024 ಕಲಂ: 5.7.12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಆದ್ಯಾದೇಶ ಕಾಯ್ದೆ 2020 ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top