ಕಡಬ: ಅಪ್ರಾಪ್ತೆ ಗರ್ಭಿಣಿ :ಇಬ್ಬರು ಯುವಕರನ್ನು ವಶಕ್ಕೆ ಪಡೆದ ಪೊಲೀಸರು

ಕಡಬ: ಅಪ್ರಾಪ್ತೆ ಗರ್ಭಿಣಿ :ಇಬ್ಬರು ಯುವಕರನ್ನು ವಶಕ್ಕೆ ಪಡೆದ ಪೊಲೀಸರು

Kadaba Times News

 ಕಡಬ: ಅಪ್ರಾಪ್ತೆಯೊಬ್ಬಳು ಗರ್ಭವತಿಯಾದ ಪ್ರಕರಣ ಬೆಳಕಿಗೆ ಬಂದಿದ್ದು ಈ ಘಟನೆಗೆ ಸಂಬಂಧಿಸಿ ಇಬ್ಬರನ್ನು ಕಡಬ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.


ಮರ್ದಾಳದ  ಇಬ್ಬರು ಯುವಕರನ್ನು ಸೋಮವಾರ ರಾತ್ರಿ  ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.



ಮರ್ದಾಳದ ನಂದನ್ ಎಂಬಾತನನ್ನು ಮತ್ತು ಮತ್ತೋರ್ವನನ್ನು  ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.   

ಈ ಬಗ್ಗೆ   ಪೋಕ್ಸೋ ಪ್ರಕರಣದಡಿ  ಪ್ರತ್ಯೇಕ  ಎರಡು   ಕೇಸು  ದಾಖಲಾಗಿರುವುದಾಗಿ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್(IPS) ಕಡಬ ಟೈಮ್ಸ್ ಗೆ ತಿಳಿಸಿದ್ದಾರೆ.


Tags

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top